ಬೆಂಗಳೂರು/ನವದೆಹಲಿ:- ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಎಕ್ಸ್ ಮಾಡಿರುವ ಮೋದಿ, ಎಸ್ಎಂ ಕೃಷ್ಣ ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದ್ದರು ಎಂದರು.
ಶ್ರೀ ಎಸ್.ಎಂ.ಕೃಷ್ಣಾಜಿಯವರು ಅಸಾಧಾರಣ ನಾಯಕ. ಸಮಾಜದ ಎಲ್ಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದವರು
ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದಾರೆ. ಕೃಷ್ಣ ಜೀ ಅವರು ಉತ್ತಮ ಓದುಗ ಮತ್ತು ಚಿಂತಕರೂ ಆಗಿದ್ದರು.
ಎಸ್.ಎಂ.ಕೃಷ್ಣ ಜೀ ಅವರೊಂದಿಗೆ ಸಂವಹನ ನಡೆಸಲು ಅನೇಕ ಅವಕಾಶ ಸಿಕ್ಕಿತ್ತು. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದಿದ್ದಾರೆ.