ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಡಿ.11ರಿಂದ ಡಿ.15ರವರೆಗೆ ನಡೆಯಲಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಏಳನೇ ಆವೃತ್ತಿಗೆ ನೋಡಲ್ ಕೇಂದ್ರವಾಗಿ ಆತಿಥ್ಯ ವಹಿಸಲಿದೆ.
ಇಲ್ಲಿನ ಬಿವಿಬಿ ಕ್ಯಾಂಪಸ್ನ ಸ್ಕೂಲ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಸೇರಿ ದೇಶದಾದ್ಯಂತ 51 ಕೇಂದ್ರಗಳಲ್ಲಿ ಹ್ಯಾಕಥಾನ್ ನಡೆಯಲಿದೆ. ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
‘ಹ್ಯಾಕಥಾನ್ನಲ್ಲಿ 180 ವಿದ್ಯಾರ್ಥಿಗಳ 30 ತಂಡಗಳು ಭಾಗಿಯಾಗಲಿದ್ದು, ನವೀನ ಯೋಜನೆಗಳಿಗೆ ಮಾರ್ಗದರ್ಶನ ನೀಡುವ ಮತ್ತು ಮೌಲ್ಯಮಾಪನ ಮಾಡುವ 50ಕ್ಕೂ ಹೆಚ್ಚು ತಜ್ಞರು ಅವರಿಗೆ ಜೊತೆಯಾಗಲಿದ್ದಾರೆ’ ಎಂದು ತಿಳಿಸಲಾಗಿದೆ.
ಸ್ಮಾರ್ಟ್ ಅಟೊಮೇಷನ್, ಕೃಷಿ, ಆಹಾರ ತಂತ್ರಜ್ಞಾನ, ಗ್ರಾಮೀಣ ಅಭಿವೃದ್ಧಿ, ಸ್ಮಾರ್ಟ್ ವಾಹನ, ಸಾರಿಗೆ ಮತ್ತು ಲಾಜಿಸ್ಟಿಕ್, ರೋಬೊಟಿಕ್ಸ್ ಮತ್ತು ಡೋನ್, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ 17 ವಿಭಾಗಗಳಲ್ಲಿನ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರ ಕಂಡುಕೊಳ್ಳಲು ಶ್ರಮಿಸಲಿದ್ದಾರೆ.