ಡಮಾಸ್ಕಸ್: ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್–ಶಾಮ್ ನೇತೃತ್ವದ ಬಂಡುಕೋರ ಪಡೆಗಳು ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಡುಕೋರರು ಸಿರಿಯಾ ಪ್ರವೇಶಿಸುತ್ತಿದ್ದಂತೆ ಏಕಾಏಕಿ ದೇಶ ತೊರೆದ ಅಧ್ಯಕ್ಷ ಬಶರ್ ಅಲ್–ಅಸ್ಸಾದ್ ಹಾಗೂ ಅವರ ಕುಟುಂಬದವರಿಗೆ ಇದೀಗ ರಷ್ಯಾ ಆಶ್ರಯ ನೀಡಿದೆ.
ಅಸ್ಸಾದ್ ಹಾಗೂ ಅವರ ಕುಟುಂಬ ರಷ್ಯಾದ ಮಾಸ್ಕೋಗೆ ಆಗಮಿಸಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಯಾದ ಕ್ರೆಮ್ಲಿನ್ ಮಾಧ್ಯಮ ವರದಿ ಮಾಡಿದೆ.
“ಅಸ್ಸಾದ್ ಮತ್ತು ಅವರ ಕುಟುಂಬದ ಸದಸ್ಯರು ಮಾಸ್ಕೋಗೆ ಆಗಮಿಸಿದ್ದಾರೆ” ಎಂದು ಮೂಲಗಳು ರಷ್ಯಾದ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದು, ಅಸ್ಸಾದ್ ಅವರ ಕುಟುಂಬಕ್ಕೆ ರಷ್ಯಾದ ಅಧಿಕಾರಿಗಳು “ಮಾನವೀಯ ಆಧಾರದ ಮೇಲೆ” ಆಶ್ರಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಸಿರಿಯಾದ ಅಧ್ಯಕ್ಷ ಸ್ಥಾನಕ್ಕೆ ಅಸ್ಸಾದ್ ರಾಜೀನಾಮೆ ನೀಡಿ ದೇಶದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ಧಾರೆ ಎಂದು ರಷ್ಯಾ ಘೋಷಿಸಿತು.
“ಬಿ ಅಸ್ಸಾದ್ ಮತ್ತು SAR ನಲ್ಲಿನ ಸಶಸ್ತ್ರ ಸಂಘರ್ಷದಲ್ಲಿ ಭಾಗವಹಿಸುವವರ ನಡುವಿನ ಮಾತುಕತೆಗಳ ಪರಿಣಾಮವಾಗಿ, ಅವರು ಅಧ್ಯಕ್ಷೀಯ ಹುದ್ದೆಯನ್ನು ತೊರೆಯಲು ನಿರ್ಧರಿಸಿದರು ಮತ್ತು ದೇಶವನ್ನು ತೊರೆದಿದ್ದು, ಶಾಂತಿಯುತವಾಗಿ ಅಧಿಕಾರವನ್ನು ವರ್ಗಾಯಿಸಲು ಸೂಚನೆಗಳನ್ನು ನೀಡಿದ್ದಾರೆ” ಎಂದು ರಷ್ಯಾದ ವಿದೇಶಾಂಗ ಸಚಿವಾಲಯವು ತಿಳಿಸಿದೆ. ಇದರ ನಡುವೆ ಬಂಡುಕೋರರು ರಾಜಧಾನಿಯನ್ನು ಮುನ್ನಡೆಸಿದ ನಂತರ ಅಸ್ಸಾದ್ ಭವಿಷ್ಯದ ಮೇಲೆ ಊಹಾಪೋಹಗಳು ಸುತ್ತಿಕೊಂಡಿದ್ದವು. ಇದಕ್ಕೂ ಮೊದಲು ಅಸ್ಸಾದ್ ಅವರು ರಷ್ಯಾ ಅಥವಾ ಇರಾನ್ನಲ್ಲಿ ಆಶ್ರಯ ಪಡೆಯಬಹುದೆಂದು ಊಹಿಸಲಾಗಿತ್ತು.
ಇದರ ನಡುವೆ ಬಂಡುಕೋರರ ಆಕ್ರಮಣಕ್ಕೆ ಸ್ವಲ್ಪ ಮುಂಚೆಯೇ ಸಿರಿಯಾದ ಉಚ್ಚಾಟಿತ ನಾಯಕ ಮಾಸ್ಕೋಗೆ ಭೇಟಿ ನೀಡಿದ್ದು ಇದಕ್ಕೂ ಮೊದಲು ಡಮಾಸ್ಕಸ್ನಲ್ಲಿ ಇರಾನ್ನ ಉನ್ನತ ಅಧಿಕಾರಿಯನ್ನು ಭೇಟಿಯಾಗಿರುವುದನ್ನು ತೋರಿಸುವ ಛಾಯಾಚಿತ್ರಗಳನ್ನು ಇರಾನ್ ಸುದ್ದಿ ಸಂಸ್ಥೆಗಳು ಪ್ರಕಟಿಸಿದವು.