ಬೆಂಗಳೂರು:- ಪಣತ್ತೂರು ಮುಖ್ಯರಸ್ತೆ ಇದೀಗ ವಾಹನ ಸವಾರರಿಗೆ ನಿತ್ಯ ನರಕ ದರ್ಶನ ಮಾಡಿಸ್ತಿದ್ದು, ಅವೈಜ್ಞಾನಿಕ ಚರಂಡಿ ಕಾಮಗಾರಿ ಸವಾರರ ಜೀವಕ್ಕೆ ಕಂಟಕ ತಂದಿಡುತ್ತಿದೆ. ಹಲವು ದಿನಗಳಿಂದ ಕಿತ್ತೋಗಿದ್ದ ರಸ್ತೆಗೆ ಇತ್ತೀಚೆಗಷ್ಟೇ ವೈಟ್ ಟಾಪಿಂಗ್ ಮಾಡಲಾಗಿತ್ತು. ಆದರೆ, ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವುದು ವಾಹನ ಸವಾರರ ಜೀವಕ್ಕೆ ಕಂಟಕವಾಗಿವೆ.
ನಕಲಿ ಆ್ಯಪ್ ಮೂಲಕ ಮೊಬೈಲ್ ಹ್ಯಾಕ್: ಮಂಗಳೂರು ಮಂದಿಗೆ ಎಚ್ಚರಿಕೆ ಕೊಟ್ಟ ಪೊಲೀಸ್!
ಒಂದೆಡೆ ಟ್ರಾಫಿಕ್ ಜಾಮ್, ಮತ್ತೊಂದೆಡೆ ಅವೈಜ್ಞಾನಿಕ ಚರಂಡಿ, ಇನ್ನೂ ಮುಂದೆ ಹೋದರೆ ಅದೇ ಕಿತ್ತೋದ ರಸ್ತೆಯ ಮಧ್ಯೆ ಸಿಲುಕಿ ಜನರು ಕಂಗಾಲಾಗಿಬಿಟ್ಟಿದ್ದಾರೆ. ರಸ್ತೆ ಬದಿಯಿರುವ ಚರಂಡಿಗೆ ದಿನ ಒಂದಿಲ್ಲೊಂದು ಕಾರಿನ ಚಕ್ರ ಸಿಲುಕಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿದ್ದು, ಜನರು ಬೇಸತ್ತು ಹೋಗಿದ್ದಾರೆ.
ರಾಜಧಾನಿಯ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತೇವೆ, ಸುಗಮ ಸಂಚಾರ ಬೆಂಗಳೂರು ಮಾಡುತ್ತೇವೆ ಅಂತ ಕೋಟಿ ಕೋಟಿ ರೂಪಾಯಿ ಮೀಸಲಿರುವ ಪಾಲಿಕೆ, ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ಸಂಕಷ್ಟ ತಂದಿಟ್ಟಿರುವುದು ಖೇದರದ ಸಂಗತಿಯಾಗಿದೆ.