ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ದುಲಿಪಾಲ ಡಿಸೆಂಬರ್ 5, 2024 ರಂದು ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಗನ ಮದುವೆ ದಿನವೇ ನಾಗಾರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಮದುವೆ ವಿಶೇಷ ಫೋಟೋಗಳನ್ನು ಶೋಭಿತಾ ಶೇರ್ ಮಾಡಿದ್ದಾರೆ.
ಶೋಭಿತಾ ದುಲಿಪಾಲ ತಮ್ಮ ಮದುವೆಯ ಸುಂದರ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನಾಗಚೈತನ್ಯ ಅಶ್ವಿನಿ ನಕ್ಷತ್ರ ತೋರಿಸುತ್ತಿರು ಫೋಟೋ, ಕಾಲಿಗೆ ಕಾಲುಂಗುರ ತೊಡಿಸುತ್ತಿರುವುದು, ಅಕ್ಕಿ ಹಾಕುತ್ತಿರುವುದು ಹೀಗೆ ಹಲವು ಫೋಟೋಗಳನ್ನು ಶೋಭೀತಾ ಶೇರ್ ಮಾಡಿದ್ದಾರೆ.
ಸಮಂತಾ ಜೊತೆಗಿನ ವಿಚ್ಛೇದನದ ನಂತರ 2 ವರ್ಷಗಳ ಕಾಲ ಶೋಭಿತಾ ಧೂಳಿಪಲ ಜೊತೆ ಡೇಟಿಂಗ್ ಮಾಡುತ್ತಿದ್ದ ನಾಗ ಚೈತನ್ಯ, ಎರಡೂ ಕಡೆಯ ಹಿರಿಯರ ಮನವೊಲಿಸಿ ಈ ವರ್ಷ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
‘ನಾಗ ಚೈತನ್ಯ ಮತ್ತು ಶೋಭಿತಾ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣ. ನಾಗ ಚೈತನ್ಯಗೆ ಅಭಿನಂದನೆಗಳು. ನಮ್ಮ ಕುಟುಂಬಕ್ಕೆ ಶೋಭಿತಾಗೆ ಸ್ವಾಗತ. ನೀನು ಈಗಾಗಲೇ ನಮ್ಮ ಬದುಕಿನಲ್ಲಿ ಸಾಕಷ್ಟು ಖುಷಿ ತಂದಿರುವೆ’ ಎಂದು ಅಕ್ಕಿನೇನಿ ನಾಗಾರ್ಜುನ ಬರೆದುಕೊಂಡಿದ್ದಾರೆ.
ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೂರ್ತಿಯ ಕೆಳಗೆ ಮದುವೆ ನಡೆದಿರುವುದು ವಿಶೇಷ ಎಂದು ನಾಗಾರ್ಜುನ ಅವರು ಹೇಳಿದ್ದರು.
ಮದುವೆಯಾದ ಬೆನ್ನಲ್ಲೇ ನವ ದಂಪತಿ ಶ್ರೀಶೈಲದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ನವ ಜೋಡಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸಾಥ್ ನೀಡಿದ್ರು.
ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ನಾಗಾರ್ಜುನ, ನಾಗ ಚೈತನ್ಯ ಮತ್ತು ಶೋಭಿತಾ ಪೂಜೆ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.