ಬೆಂಗಳೂರು:- ಕರ್ನಾಟಕದ ಬ್ಯಾಂಕ್ಗಳಲ್ಲಿ ಹೇಳಲಾಗುತ್ತಿರುಲ ಹಿಂದಿ ಭಾಷೆ ಬಗ್ಗೆ ನಿರ್ಮಲಾ ಸಿತಾರಮನ್ಗೆ ಕನ್ನಡ ಪ್ರಾಧಿಕಾರ ಪತ್ರ ಬರೆದಿದೆ.
ಪಿಜ್ಜಾ, ಬರ್ಗರ್ ಪ್ರಿಯರೇ ಹುಷಾರ್: ಸಂಶೋಧನೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಬೆಳಕಿಗೆ!
ಕರ್ನಾಟಕದ ಹಲವು ಬ್ಯಾಂಕ್ಗಳಲ್ಲಿ ಹಿಂದಿಯಲ್ಲಿ ಮಾತ್ರವೇ ವಹಿವಾಟು ನಡೆಸಲಾಗುತ್ತಿದೆ. ರಾಜಧಾನಿ ಸೇರಿದ್ದಂತೆ ರಾಜ್ಯದ ಹಲವು ಬ್ಯಾಂಕ್ಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಇದು ಜನರ ಸಂಕಷ್ಟಕ್ಕೆ ಕಾಣವಾಗಿದೆ.
ರಾಜ್ಯದ ಬ್ಯಾಂಕ್ಗಳಲ್ಲಿ ಹಿಂದಿ ಹೇರಿಕೆ ಕಂಡು ಬರ್ತಿದೆ. ಈ ವಿರುದ್ಧ ಕನ್ನಡ ಪ್ರಾಧಿಕಾರ ಗರಂ ಆಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸಿತಾರಮನ್ಗೆ ಪತ್ರ ಬರೆಯಲು ಮುಂದಾಗಿದೆ. ಬೆಂಗಳೂರಿನಲ್ಲಿ ಕೆಲವು ಬ್ಯಾಂಕ್ಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ವ್ಯವಹಾರ ಮಾಡಲಾಗುತ್ತಿದೆ. ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಈ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೇಸರ ಹೊರ ಹಾಕಿದೆ. ಹಿಂದಿ ಹೇರಿಕೆ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸಚಿವ ನಿರ್ಮಲಾ ಸೀತಾರಮನ್ಗೆ ಪತ್ರ ಬರೆದು ಮನವಿಗೆ ಮುಂದಾಗಿದೆ. ಬೆಂಗಳೂರು ಸೇರಿದ್ದಂತೆ ರಾಜ್ಯದ ಹಲವು ಬ್ಯಾಂಕ್ಗಳಲ್ಲಿ ಕನ್ನಡ ನಿರಾಕರಣೆ ಮಾಡಲಾಗುತ್ತಿದೆ. ಸಾಕಷ್ಟು ಜನರಿಗೆ ದೊಡ್ಡ ಸಂಕಷ್ಟಕ್ಕೆ ಇದು ಕಾರಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವಿವಿಧ ಬ್ಯಾಂಕುಗಳು ರಾಜ್ಯದ ತಮ್ಮ ಶಾಖೆಗಳಿಗೆ ಬೇರೆ ಬೇರೆ ರಾಜ್ಯಗಳ ಸಿಬ್ಬಂದಿಯನ್ನು ನಿಯೋಜಿಸುತ್ತಿರುವುದು ಹೆಚ್ಚುತ್ತಿದೆ. ಇದರಿಂದ ಕನ್ನಡ ತಿಳಿದಿಲ್ಲದ ಬ್ಯಾಂಕ್ ಉದ್ಯೋಗಿಗಳೊಂದಿಗೆ ವ್ಯವಹರಿಸಲು ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ರಾಜ್ಯದ ಎಲ್ಲ ಬ್ಯಾಂಕುಗಳಿಗೆ ನೇಮಕಾತಿ ವೇಳೆ ಕನ್ನಡ ಬಲ್ಲವರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಬ್ಯಾಂಕ್ ಉದ್ಯೋಗಿಗಳು ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬುದು ಕನ್ನಡಿಗರು ಆಗ್ರಹವಾಗಿದೆ.