ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ 50 ವಿದ್ಯಾರ್ಥಿಗಳ ಪೈಕಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವಂತಹ ಘಟನೆ ಜರುಗಿದೆ.
ಪುಷ್ಪ ಕಮಾಲ್: ಮೂರೇ ದಿನಕ್ಕೆ ಸಿನಿಮಾ ಗಳಿಸಿದ ಹಣವೆಷ್ಟು!? ಕೇಳಿದ್ರೆ ದಂಗಾಗ್ತೀರಾ!?
ಜಿಲ್ಲೆಯ ಹೊಸದುರ್ಗದ ಸೇಂಟ್ ಅಂತೋನಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
3 ಖಾಸಗಿ ಬಸ್ನಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಮೌಲಂಗಿ ಬಳಿಯ ಹೋಮ್ ಸ್ಟೇನಲ್ಲಿ ವಿದ್ಯಾರ್ಥಿಗಳು ತಂಗಿದ್ದರು. ಬೆಳಗ್ಗೆ ಜಲಸಾಹಸ ಕ್ರಿಡೆ ಆಡಿ ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಸ್ಥಳೀಯ ಗ್ರಾಮಸ್ಥರು ಸೇರಿ, ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ.
ಬಳಿಕ ಗಾಯಗೊಂಡವರನ್ನು ಎರಡು ಆಂಬ್ಯುಲೆನ್ಸ್ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.