ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ಪುಷ್ಪ 2 ಸಿನಿಮಾ ಭರ್ಜರಿ ಪ್ರದರ್ಶನ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಮಾಸ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ.
ನಾದಿನಿ ಮೇಲೆ ಮೋಹ: ಹೆಣವಾದ ಬಾವ! ಸಕ್ಕರೆ ನಾಡಲ್ಲಿ ಭಯಾನಕ ಸ್ಟೋರಿ! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!
ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಯಿತು. ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲೆಡೆಯೂ ಹೌಸ್ಫುಲ್ ಆಗಿದೆ. ವೀಕೆಂಡ್ನಲ್ಲೂ ಅಬ್ಬರ ಜೋರಾಗಿಯೇ ಇದೆ. ಆದ್ದರಿಂದ ಹಲವು ಹೊಸ ದಾಖಲೆಗಳನ್ನು ‘ಪುಷ್ಪ 2’ ಚಿತ್ರ ಬರೆಯುತ್ತಿದೆ. ಈವರೆಗೂ ವಿಶ್ವಾದ್ಯಂತ ಬರೋಬ್ಬರಿ 621 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಚಿತ್ರತಂಡವೇ ಮಾಹಿತಿ ನೀಡಿದೆ.
ಪುಷ್ಪ 2’ ಸಿನಿಮಾಗೆ ಬಂಡವಾಳ ಹೂಡಿರುವ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಸೋಶಿಯಲ್ ಮೀಡಿಯಾ ಮೂಲಕ ಲೆಕ್ಕ ನೀಡಿದೆ. ವಿಶ್ವಾದ್ಯಂತ 3 ದಿನಕ್ಕೆ 621 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೊಸ ಪೋಸ್ಟರ್ ಮೂಲಕ ತಿಳಿಸಲಾಗಿದೆ.
ತುಂಬ ಅದ್ದೂರಿಯಾಗಿ ‘ಪುಷ್ಪ 2’ ಸಿನಿಮಾವನ್ನು ಮಾಡಲಾಗಿದೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.