ಬೆಂಗಳೂರು:- ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬಾಣಂತಿಯರ ಸರಣಿ ಸಾವು ಕೇಸ್: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ!
ಈ ಸಂಬಂಧ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ. ಆದರೆ ಕೇಂದ್ರ ವಿರುದ್ಧ ಪದೇಪದೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಬಾಣಂತಿಯರ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಸಿದ್ದರಾಮಯ್ಯ ರಾಜಕೀಯಕ್ಕೆ ಬರುವಾಗ ಬಳ್ಳಾರಿ ಬಗ್ಗೆ ಬಹಳಷ್ಟು ಮಾತಾಡಿದ್ದಾರೆ. ಐವಿ ದ್ರಾವಣ ಸ್ಯಾಂಪಲ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರೂ ಪಕ್ಕದ ರಾಜ್ಯಗಳಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಲಿಲ್ಲ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆಯಲ್ವಾ? ಅಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಿಲ್ಲ ಎಂದು ಜೋಶಿ ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣ ವಿಫಲರಾಗಿದ್ದಾರೆ. ಆರೋಗ್ಯ ಸಚಿವರು ಬರೀ ಮುಖ್ಯಮಂತ್ರಿ ಹಿಂದೆ ಓಡಾಡಿಕೊಂಡಿದ್ದಾರೆ. ಯಾವ ಮಂತ್ರಿಗಳೂ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಎಂದು ಸಂಪುಟದಲ್ಲಿ ಸಚಿವರಿಗೆ ಸಿಎಂ ಹೇಳಿದ್ದಾರೆ, ಆದರೂ ಮಂತ್ರಿಗಳು ಇದುವರೆಗೂ ಭೇಟಿ ನೀಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.