ನವದೆಹಲಿ: ಚಿಲಿ ದೇಶದ ಮಾಜಿ ಅಧ್ಯಕ್ಷೆ ಮತ್ತು ಜಾಗತಿಕ ಮಾನವ ಹಕ್ಕುಗಳ ಪ್ರತಿಪಾದಕಿ ಮಿಶೆಲ್ ಬಚೆಲೆಟ್ ಅವರಿಗೆ 2024ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.
ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೇತೃತ್ವದ ಅಂತಾರಾಷ್ಟ್ರೀಯ ಜ್ಯೂರಿಗಳಿದ್ದ ಸಮಿತಿ ಈ ಪ್ರಶಸ್ತಿ ಘೋಷಿಸಿದೆ.
ಜಾಗತಿಕ ಶಾಂತಿ, ಸಮಾನತೆ, ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಸಂಕಷ್ಟದ ಸಂದರ್ಭದಲ್ಲಿ ಭಾರತದ ಜೊತೆಗಿನ ಚಿಲಿ ಕೊಡುಗೆಗಳನ್ನು ಸ್ಮರಿಸಿ ಇಂದಿರಾಗಾಂಧಿ ಶಾಂತಿ, ನಿಶಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿ ನೀಡಲಾಗುತ್ತಿದೆ.
ವೆರೊನಿಕಾ ಮಿಶೆಲ್ ಬಚೆಲೆಟ್ ಜೆರಿಯಾ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಎರಡು ಅವಧಿ ಹಾಗೂ ಚಿಲಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಲಿಂಗ ಸಮಾನತೆ ಮತ್ತು ಅಲಕ್ಷಿತ ಸಮುದಾಯದ ಹಕ್ಕಿಗಾಗಿ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಹೋರಾಡಿದ್ದಾರೆ.