ಬೀದರ್:- ಬಿಜೆಪಿ ಶಾಸಕರಿಗೆ ಏಕವಚನದಲ್ಲಿ ನಿಂದಿಸಿದ ಆರ್ಟಿಓ ಇನ್ಸ್ಪೆಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ.
ವ್ಯಾಯಾಮವನ್ನು ಗರ್ಭಾವಸ್ಥೆಯಲ್ಲಿ ಮಾಡೋದು ಒಳ್ಳೆಯದಾ!? ತಜ್ಞರು ಹೇಳುವುದೇನು!?
ಶಾಸಕ ಶೈಲೇಂದ್ರ ಬೆಲ್ದಾಳೆ ಅವರೊಂದಿಗೆ ಅನುಚಿತ ವರ್ತನೆ ತೋರಿ, ಏಕವಚನದಲ್ಲಿ ಮಾತಾನಾಡಿದ್ದ ಆರೋಪದ ಮೇಲೆ ಆರ್ಟಿಓ ಇನ್ಸ್ಪೆಕ್ಟರ್ ಒಬ್ಬರನ್ನ ಅಮಾನತುಗೊಳಿಸಲಾಗಿದೆ.
ಮಂಜುನಾಥ ಕೊರವಿ ಅಮಾನತುಗೊಂಡ ಇನ್ಸ್ಪೆಕ್ಟರ್. ಬೀದರ್ ಸಾರಿಗೆ ಮತ್ತು ರಸ್ತೆ ಸುರಕ್ಷಿತ ಆಯುಕ್ತರು ಅಮಾನತು ಮಾಡುವಂತೆ ಆದೇಶಿಸಿದ್ದಾರೆ.
ಜಿಲ್ಲೆಯ ಹೊರವಲಯದ ನೌಬಾದ್ ಬಳಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆಗೆ ಆರ್ಟಿಓ ಇನ್ಸ್ಪೆಕ್ಟರ್ ಏಕವಚನದಲ್ಲಿ ಮಾತಾನಾಡಿದ್ದರು. ಈ ಹಿನ್ನೆಲೆ ಅವರನ್ನು ಬೀದರ್ನಿಂದ ರಾಯಚೂರಿಗೆ ವರ್ಗಾವಣೆ ಮಾಡಲಾಗಿತ್ತು. ಜೊತೆಗೆ ಏಕವಚನದಲ್ಲಿ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ಬೆಲ್ದಾಳೆ ಅವರು ಸರ್ಕಾರಕ್ಕೆ ಹಕ್ಕುಚ್ಯುತಿ ಸಲ್ಲಿದರು. ಹಕ್ಕುಚ್ಯುತಿ ಸಲ್ಲಿಸಿದ್ದ ಹಿನ್ನೆಲೆ ಸಾರಿಗೆ ಆಯುಕ್ತರು ಪರಿಶೀಲನೆ ನಡೆಸಿ, ಆರ್ಟಿಓ ಇನ್ಸ್ಪೆಕ್ಟರ್ನನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.