ಹಣಕ್ಕಾಗಿ ನಕಲಿ ವೈದ್ಯಕೀಯ ಪದವಿ ನೀಡುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರಲ್ಲಿ ಆರೋಪಿಯ ಹೆಸರು ರಮೇಶ್, ಈ ಗ್ಯಾಂಗ್ ಅತ್ಯಂತ ಜಾಣತನದಿಂದ ಕೆಲಸ ಮಾಡುತ್ತಿದ್ದು, “ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್ ಗುಜರಾತ್ ಹೆಸರಿನಲ್ಲಿ ನಕಲಿ ಪದವಿಗಳನ್ನು ಹಂಚುತ್ತಿತ್ತು, ತನಿಖೆ ವೇಳೆ ನೂರಾರು ನಕಲಿ ಪ್ರಮಾಣಪತ್ರಗಳು ಪೊಲೀಸರಿಗೆ ಸಿಕ್ಕಿವೆ.
ಸೂರತ್ ನಗರದ ಪಾಂಡೆಸರಾ ಪ್ರದೇಶದಲ್ಲಿ ನಕಲಿ ಪದವಿ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಕಳೆದ ಕೆಲವು ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ನಕಲಿ ಪದವಿಗಳನ್ನು ವಿತರಿಸಲಾಗಿದೆ ಎಂದು ಘಟನಾ ಸ್ಥಳದಲ್ಲಿದ್ದ ದಾಖಲೆಗಳು ಬಹಿರಂಗಪಡಿಸಿವೆ.
ಅನೇಕ ಜನರು ಈ ದಂಧೆಯಿಂದ ನಕಲಿ ಪದವಿಗಳನ್ನು ಖರೀದಿಸಿ ತಮ್ಮದೇ ಆದ ಕ್ಲಿನಿಕ್ಗಳನ್ನು ನಡೆಸುತ್ತಿದ್ದರು. ನಕಲಿ ವೈದ್ಯ ಪದವಿ ಹೊಂದಿರುವ ಮೂವರು ಅಲೋಪತಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.ಕೂಡಲೇ ದಾಳಿ ಮಾಡಿದ್ದಾರೆ.
ಗ್ಯಾಂಗ್ ಜನರಿಗೆ 70 ಸಾವಿರ ರೂ.ಗೆ ತರಬೇತಿ ನೀಡುತ್ತಿತ್ತು. ಈ ಗ್ಯಾಂಗ್ ನಕಲಿ ವೈದ್ಯರು 8 ಮತ್ತು 12ನೇ ತರಗತಿ ಪಾಸಾದವರಿಗೆ 60 ರಿಂದ 80 ಸಾವಿರ ರೂ.ಗೆ ಪದವಿಯನ್ನು ಮಾರಾಟ ಮಾಡುತ್ತಿತ್ತು ಎನ್ನಲಾಗಿದೆ.