ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹತ್ಯಾಕಾಂಡದ ಮಾಸ್ಟರ್ಮೈಂಡ್ ಪ್ರಧಾನಿ ಯೂನಸ್ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಬಳಿಕ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಹಸೀನಾ ಬಾಂಗ್ಲಾ ಪ್ರಧಾನಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯೂನಸ್ ಜನಾಂಗೀಯ ಹತ್ಯೆ ನಡೆಸಿದ್ದು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. 1975 ರಲ್ಲಿ ತನ್ನ ತಂದೆ ಶೇಖ್ ಮುಜಿಬ್-ಉರ್-ರೆಹಮಾನ್ ಹತ್ಯೆಯ ರೀತಿಯಲ್ಲಿಯೇ ಆಗಸ್ಟ್ 5 ರಂದು ತನ್ನ ಮತ್ತು ತನ್ನ ಸಹೋದರಿ ಶೇಖ್ ರೆಹಾನಾ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ಶೇಖ್ ಹಸೀನಾ ಹೇಳಿದ್ದಾರೆ. ಯೂನಸ್ಗೆ ಅಧಿಕಾರದ ಹಸಿವು ಇದೆ, ಆದ್ದರಿಂದಲೇ ಇಂಥಾ ದಾಳಿಯನ್ನು ನಡೆಯಲು ಬಿಟ್ಟಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ನಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಯಿಂದಾಗಿ ರಾಜೀನಾಮೆ ನೀಡಿದ ನಂತರ ಭಾರತದಲ್ಲಿ ಆಶ್ರಯ ಪಡೆದ ನಂತರ ಹಸೀನಾ ಅವರ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ. ಆಗಸ್ಟ್ 5 ರಂದು ಬಾಂಗ್ಲಾದೇಶದ ಢಾಕಾದಲ್ಲಿರುವ ತಮ್ಮ ಅಧಿಕೃತ ನಿವಾಸದ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿದ ಅವರು,ಶಸ್ತ್ರಸಜ್ಜಿತ ಪ್ರತಿಭಟನಾಕಾರರನ್ನು ಕಳುಹಿಸಲಾಗಿತ್ತು.
ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರೆ, ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಇಂದು ನನ್ನ ಮೇಲೆ ನರಮೇಧದ ಆರೋಪ ಹೊರಿಸಲಾಗುತ್ತಿದೆ. ವಾಸ್ತವವಾಗಿ, ಯೂನಸ್ ಯೋಜಿತ ರೀತಿಯಲ್ಲಿ ನರಮೇಧದಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಹತ್ಯಾಕಾಂಡದ ಹಿಂದಿನ ಪ್ರಮುಖ ಸಂಚುಕೋರ ಯೂನಸ್ ಎಂದಿದ್ದಾರೆ.