ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದ್ದು ರಕ್ಷಣಾ ಸಚಿವ ಕಿಮ್ ಯೋಂಗ್-ಹ್ಯುನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಮರ ಕಾನೂನಿನ ಕಲ್ಪನೆಯ ಮಾಸ್ಟರ್ ಮೈಂಡ್ ಎಂದು ಕಿಮ್ ಅವರನ್ನು ಕರೆಯಲಾಗಿತ್ತು. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಬುಧವಾರ ರಾತ್ರಿ 11 ಗಂಟೆಗೆ ಹಠಾತ್ತನೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಸಮರ ಕಾನೂನನ್ನು ಹೇರುವುದಾಗಿ ಘೋಷಿಸಿದರು.
ಆದರೆ ಪ್ರತಿಪಕ್ಷಗಳ ವಿರೋಧ ಮತ್ತು ಸಾರ್ವಜನಿಕರ ಕೋಲಾಹಲದ ಬಳಿಕ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ಈ ಹಿಂದೆ ಸಂಸತ್ತಿನಲ್ಲಿ ಈ ನಿರ್ಧಾರದ ವಿರುದ್ಧ ನಿರ್ಣಯ ಮಂಡಿಸಿ ಅದನ್ನು ಕೈಬಿಡಲಾಗಿತ್ತು. ಸೌದಿ ಅರೇಬಿಯಾದ ರಾಯಭಾರಿ ಚೋಯ್ ಬ್ಯುಂಗ್-ಹ್ಯುಕ್ ಅವರನ್ನು ಹೊಸ ರಕ್ಷಣಾ ಸಚಿವರನ್ನಾಗಿ ಹೆಸರಿಸಲಾಗಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಅವರ ಪಕ್ಷವು ಸಂಸತ್ತಿನಲ್ಲಿ ಕಡಿಮೆ ಬೆಂಬಲವನ್ನು ಹೊಂದಿದೆ. ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷ ಸಂಸತ್ತಿನಲ್ಲಿ ಪ್ರಾಬಲ್ಯ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತಾರೂಢ ಪೀಪಲ್ಸ್ ಪವರ್ ಪಕ್ಷದ ಪ್ರತಿಯೊಂದು ನಿರ್ಧಾರವನ್ನು ವಿರೋಧ ಪಕ್ಷವು ಸಂಸತ್ತಿನಲ್ಲಿ ರದ್ದುಪಡಿಸುತ್ತದೆ.
ಕಿಮ್ ಅವರನ್ನು ಅಧ್ಯಕ್ಷ ಯೂನ್ ಅರ ವಿಶ್ವಾಸಾರ್ಹ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಸಂಪುಟದ 12 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವು ಪ್ರಮುಖ ನಾಯಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ವಿರೋಧಿಗಳು ಮಾತ್ರವಲ್ಲದೆ ಹಲವು ಕ್ಯಾಬಿನೆಟ್ ನಾಯಕರು ಕೂಡ ಸಮರ ಕಾನೂನಿನ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಅವರ ಪಕ್ಷದ ಹಿರಿಯ ನಾಯಕ, ಪೀಪಲ್ ಪವರ್ ಪಾರ್ಟಿ, ಹ್ಯಾನ್ ಡಾಂಗ್ ಹೂನ್ ಅವರು ಪ್ರಮುಖ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ ಅವರೊಂದಿಗೆ ಕೈಜೋಡಿಸಿದ್ದಾರೆ, ಈ ನಿರ್ಧಾರವನ್ನು ತಪ್ಪು ಎಂದು ಕರೆದಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ 300 ಸಂಸದರಲ್ಲಿ ಅಧ್ಯಕ್ಷರ ಪೀಪಲ್ ಪವರ್ ಪಕ್ಷವು 108 ಸಂಸದರನ್ನು ಹೊಂದಿದೆ.ಅ