ಬೀಜಿಂಗ್ : ನೈಋತ್ಯ ಚೀನಾದ ಗ್ವಿಝೌ ಪ್ರಾಂತದಲ್ಲಿ ದೋಣಿ ಮುಳುಗಿ 8 ಮಂದಿ ಸಾವನ್ನಪ್ಪಿದ್ದು 5 ಮಂದಿಯನ್ನು ರಕ್ಷಿಸಲಾಗಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ನಗರಸಭೆಯ ಮಾಲಕತ್ವದ ಈ ದೋಣಿ ಅಕ್ರಮವಾಗಿ ಪ್ರಯಾಣಿಕರನ್ನು ಕರೆದೊಯ್ಯುವ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ಮಿತಿ ಮೀರಿದ ಪ್ರಯಾಣಿಕರು ತುಂಬಿದ್ದರಿಂದ ದೋಣಿ ನೀರಿನಲ್ಲಿ ಮುಳುಗಿದ್ದು ಈ ದುರ್ಘಟನೆ ಸಂಭವಿಸಿದೆ.
ಪಿಂಗ್ಝೆಂಗ್ ನದಿಯ ಮತ್ತೊಂದು ದಡದಿಂದ ಗಿಡಮೂಲಿಕೆ ಸಂಗ್ರಹಿಸಲು ಸ್ಥಳೀಯ ಗ್ರಾಮಸ್ಥರು ದೋಣಿಯಲ್ಲಿ ಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ಪಿಂಗ್ಝೆಂಗ್ ನದಿಯಲ್ಲಿ ದೋಣಿಯ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿಲ್ಲ ಎಂದು ಚೀನಾದ `ಕಿಯಾಕ್ಸಿನ್’ ಸುದ್ದಿಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.