ಕೇರಳದಲ್ಲಿ ಒಂದು ಅಮಾನವೀಯ ಘಟನೆ ಜರುಗಿದೆ. ಇದು ಇಡೀ ಮನುಕುಲವೇ ಮರುಕ ಹುಟ್ಟಿಸುವಂತೆ ಮಾಡಿದೆ. ಹಾಸಿಗೆಯಲ್ಲಿ ಮೂತ್ರ ಮಾಡಿದ 2 ವರ್ಷದ ಮಗುವಿನ ಖಾಸಗಿ ಭಾಗಕ್ಕೆ ದುಷ್ಟರು ಹಾನಿ ಮಾಡಿದ ಘಟನೆ ಜರುಗಿದೆ.
ಕೊಲೆ ಪ್ರಕರಣದಲ್ಲಿ ಆರೋಪಿ ಕೈಬಿಟ್ಟ ಆರೋಪ: ರಾಮಮೂರ್ತಿ ನಗರ ಠಾಣೆ ಇನ್ಸ್ಪೆಕ್ಟರ್ ಸೇರಿ 6 ಮಂದಿ ಸಿಬ್ಬಂದಿ ಸಸ್ಪೆಂಡ್!
ತಿರುವನಂತಪುರಂನಲ್ಲಿರುವ ಶಿಶು ಪಾಲನಾ ಕೇಂದ್ರದಲ್ಲಿ ಎರಡೂವರೆ ವರ್ಷದ ಮಗು ರಾತ್ರಿ ಮಲಗಿದ್ದಾಗ ಮೂತ್ರ ಮಾಡಿಕೊಂಡಿತ್ತು. ಅದಕ್ಕೆ ಸಿಟ್ಟಿಗೆದ್ದ ಮೂವರು ಸಿಬ್ಬಂದಿ ಮಗುವನ್ನು ಥಳಿಸಿದ್ದಲ್ಲದೆ ಅದರ ಖಾಸಗಿ ಭಾಗಗಳಿಗೆ ಗಾಯ ಮಾಡಿದ್ದಾರೆ.
ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯಿಂದ ನಡೆಸಲ್ಪಡುವ ಕೇಂದ್ರದಿಂದ ಮೂವರು ಆಯಾಗಳನ್ನು ಬಂಧಿಸಲಾಗಿದೆ. ಕೆಲ ದಿನಗಳ ಬಳಿಕ ಮಗು ಅಸ್ವಸ್ಥವಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಖಾಸಗಿ ಭಾಗಗಳಲ್ಲಿ ಗಾಯದ ಗುರುತಿರುವುದು ಪತ್ತೆಯಾಗಿದೆ. ಅದು ಸುಮಾರು ಏಳೆಂಟು ದಿನದ ಹಿಂದಿನದು ಎಂದು ತಿಳಿದುಬಂದಿದೆ.
ಆಸ್ಪತ್ರೆ ವೈದ್ಯರು ಈ ಸಮಸ್ಯೆಯನ್ನು ಇಲ್ಲಿಗೆ ಬಿಡಲಿಲ್ಲ, ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಮಗು ಮೂತ್ರ ಮಾಡಿತೆಂದು ಆಯಾಗಳು ಮಗುವಿಗೆ ಥಳಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಮೂವರು ಆಯಾಗಳನ್ನು ಕೆಲಸದಿಂದ ವಜಾ ಮಾಡಿದ್ದಷ್ಟೇ ಅಲ್ಲದೆ ಪೋಕ್ಸೊ ಕಾಯ್ದೆಯಲ್ಲಿ ಬಂಧಿಸಲಾಗಿದೆ.