ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಜತ್ ತಮ್ಮ ಖಡಕ್ ಮಾತು ಹಾಗೂ ನೇರ ನುಡಿಗಳಿಂದಲೇ ಸಖತ್ ಸದ್ದು ಮಾಡ್ತಿದ್ದಾರೆ.
ನಿನ್ನೆಯಿಂದ ಬಿಗ್ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಅಂತೆಯೇ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ.
ಶಿಶಿರ್ ಗೆಳತಿ ಐಶ್ವರ್ಯಾಗೆ ಮೂರು ಹಾಗಲಕಾಯಿ ತಿನ್ನುವಂತೆ ಕೇಳಿಕೊಂಡಿದ್ದಾರೆ. ಅದೇ ರೀತಿ ಗೌತಮಿಗೆ ರಜತ್ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿದೆ. ಅಲ್ಲದೇ ರಜತ್ಗೆ ಉಗ್ರಂ ಮಂಜು ತನ್ನ ತಲೆ ಕೂದಲು ಬೋಳಿಸಿಕೊಳ್ಳುವಂತೆ ಹೇಳಿದ್ದಾರೆ. ಅದಕ್ಕೆ ರಜತ್ ‘ಓಕೆ’ ಎಂದು ತಮ್ಮ ಕೂದಲನ್ನೂ ಟ್ರಿಮ್ ಮಾಡಿಸಿಕೊಂಡಿದ್ದಾರೆ.
ಇನ್ನೂ, ಈ ಟಾಸ್ಕ್ ಕಳೆದ ಸೀಸನ್ 10ರಲ್ಲೂ ಮಾಡಿಸಲಾಗಿತ್ತು. ಕಳೆದ ಸೀಸನ್ನಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರು ಇದೇ ಟಾಸ್ಕ್ ನಿಮಿತ್ತ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದರು. ತಮ್ಮ ತಲೆಯನ್ನು ಬೋಳಿಸಿಕೊಂಡ ಮೇಲೆ ಕಾರ್ತಿಕ್ ಮಹೇಶ್ಗೆ ಅದೃಷ್ಟ ಖುಲಾಯಿಸಿತ್ತು. ಈ ಬಾರಿಯ ಟಾಸ್ಕ್ನಲ್ಲೂ ರಜತ್, ಕಾರ್ತಿಕ್ ಮಹೇಶ್ ಅವರಂತೆ ತಲೆ ಬೋಳಿಸಿಕೊಂಡಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಜತ್ಗೂ ಕೂಡ ಅದೃಷ್ಟ ಒಲಿಯುತ್ತಾ ಅಂತ ಕಾದು ನೋಡಬೇಕಿದೆ.
ಇನ್ನೂ ಈ ಬಾರಿಯ ಕನ್ನಡದ ಬಿಗ್ಬಾಸ್ನಲ್ಲಿ ದಿನಕೊಂದು ತಿರುವು, ಊಹಿಸಲಾರದ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.