ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದರ್ಶನ್ ಮತ್ತು ಪವಿತ್ರಾ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.
ಗೃಹಲಕ್ಷ್ಮೀ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದೇನು!?
ಈ ವೇಳೆ ಪವಿತ್ರಾ ಪರ ಲಾಯರ್ ಅವರು ವಾದ ಮಾಡುತ್ತಾ ಕಿಡ್ನ್ಯಾಪ್ ನಲ್ಲಿ ಪವಿತ್ರಾ ಪಾತ್ರ ಇಲ್ಲ. ದರ್ಶನ್ ಸೂಚನೆ ಮೇರೆಗೆ ಕಿಡ್ನ್ಯಾಪ್ ನಡೆದಿತ್ತು ಎಂದಿದ್ದರು.
ಪವಿತ್ರಾ ಗೌಡ ಹೈಕೋರ್ಟ್ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ಪವಿತ್ರಗೌಡ- ದರ್ಶನ್ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಪವಿತ್ರಾಗೌಡ ಮನೆಯಲ್ಲಿ ಪವನ್ ಕೆಲಸಕ್ಕೆ ಇದ್ದ. ದರ್ಶನ್ ಸೂಚನೆಯ ಮೇರೆಗೆ ಪವನ್ ಕಿಡ್ನಾಪ್ ಮಾಡಿದ್ದಾನೆ ಎಂದು ವಾದಿಸಿದ್ದಾರೆ.
ರೇಣುಕಾಸ್ವಾಮಿ ಬರುವ ತನಕ ಶೆಡ್ನಲ್ಲಿ ಪವನ್ ಕಾದಿದ್ದ. ದರ್ಶನ್ ಶೆಡ್ಗೆ ಹೋಗುವಾಗ ಪವಿತ್ರ ಗೌಡಳನ್ನು ಕರೆದುಕೊಂಡು ಹೋಗಿದ್ದಾರೆ. ಪವಿತ್ರಾಗೌಡ ಶೆಡ್ಗೆ ಹೋಗಿ ರೇಣುಕಾಸ್ವಾಮಿಗೆ ಬೈಯ್ದು ವಾಪಸ್ ಮನೆಗೆ ಬಂದಿದ್ದಾರೆ. ಆದರೆ ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ಮಾಡಿದಾಗ ರೇಣುಕಾಸ್ವಾಮಿ ಸಾವು ಸಂಭವಿಸಿರಬಹುದು ಎಂದು ಹೇಳಿದರು
ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಆದರೆ ಚಪ್ಪಲಿಯಿಂದ ಹೊಡೆದಿರುವುದು ರೇಣುಕಾಸ್ವಾಮಿ ಸಾವಿಗೆ ಕಾರಣ ಅಲ್ಲ. ನನ್ನ ಕಕ್ಷಿದಾರರಿಗೆ ಅಪ್ರಾಪ್ತ ಮಗಳಿದ್ದಾಳೆ. ಇದನ್ನೆಲ್ಲಾ ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.