ನಮಗೆ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಹೇಗೋ ಹಾಗೆ ಪಾನ್ ಕಾರ್ಡ್ ಕೂಡ ಒಂದು ಪ್ರಮುಖ ದಾಖಲೆಗಳಲ್ಲಿ ಒಂದು. ನೀವು ಯಾವುದೇ ಅರ್ಜಿ ಸಲ್ಲಿಸಲೂ, ಹಾಗೂ ಬ್ಯಾಂಕ್ ಖಾತೆ ಮಾಡಿಸಲು, ಮತ್ತು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಪಾನ್ ಕಾರ್ಡ್ ಈಗ ಹೆಚ್ಚು ಅವಶ್ಯಕ.
ಫೆಂಗಲ್ ಚಂಡಮಾರುತ ಮಳೆಯ ಅಬ್ಬರ: ಚಿತ್ರದುರ್ಗದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಇಂತಹ ಪಾನ್ ಕಾರ್ಡ್ ಕಳೆದು ಹೋದರೆ ಅಥವಾ ಹೊಸದಾಗಿ ಮಾಡಿಸಬೇಕೆಂದುಕೊಂಡವರು ಮನೆಯಲ್ಲೇ ಕೂತು ಉಚಿತವಾಗಿ ಪಡೆಯಬಹುದು ಅದು ಹೇಗೆ ಅಂತೀರಾ!? ಈ ಸ್ಟೋರಿ ನೋಡಿ.
ಎಸ್, ನೀವೇನಾದರೂ ಇದೀಗ ಹೊಸದಾಗಿ ಪಾನ್ ಕಾರ್ಡ್ ಮಾಡಿಸಬೇಕು ಅಥವಾ ನಿಮ್ಮ ಪಾನ್ ಕಾರ್ಡ್ ನಲ್ಲಿರುವ ವಿವರಗಳನ್ನು ತಿದ್ದುಪಡಿ ಮಾಡಬೇಕು ಎಂದು ಅಂದುಕೊಂಡಿದ್ದಲ್ಲಿ ನಿಮಗೆಲ್ಲರಿಗೂ ಸಿಹಿ ಸುದ್ದಿ ಎಂದು ಹೇಳಬಹುದು. ಅದೇನೆಂದರೆ ನೀವು ಈಗ ಮನೆಯಲ್ಲಿಯೇ ಕುಳಿತು ಸುಲಭವಾಗಿ ಪಾನ್ ಕಾರ್ಡ್ 2.0 ಯೋಜನೆ ಅಡಿಯಲ್ಲಿ ನೀವು ಪಾನ್ ಕಾರ್ಡನ್ನು ಅಥವಾ ನಿಮ್ಮ ಪಾನ್ ಕಾರ್ಡ್ ನ ತಿದ್ದುಪಡಿಯನ್ನು ಮಾಡಿಕೊಳ್ಳುವುದು ಮತ್ತು ಈ ಪಾನ್ ಕಾರ್ಡ್ ನಿಮ್ಮ ಇ-ಮೇಲ್ ಐಡಿಗೆ ನೇರವಾಗಿ ಕಳುಹಿಸಲಾಗುತ್ತದೆ.
ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್
ವಿಳಾಸ ಪುರಾವೆ
ಜನನ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವೋಟರ್ ಐಡಿ
ಅಭ್ಯರ್ಥಿಯ 2 ಭಾವಚಿತ್ರ (ಫೋಟೋ)
ಇ-ಮೇಲ್ ಐಡಿ
ಮೊಬೈಲ್ ನಂಬರ್
ಹಾಗೂ ನಿಗದಿಪಡಿಸಿದ ಶುಲ್ಕ (₹107 ರೂ.)
ಪ್ಯಾನ್ ಕಾರ್ಡ್ 2.0 ಅರ್ಜಿ ಸಲ್ಲಿಸುವುದು ಹೇಗೆ?
ಮೊದಲನೇದಾಗಿ ನೀವು ನಮ್ಮ ದೇಶದ ಅಧಿಕೃತ ಆದಾಯ ತೆರಿಗೆ ಜಾಲತಾಣಕ್ಕೆ (ವೆಬ್ ಸೈಟ್ ಗೆ) ತೆರಳ ಬೇಕಾಗುತ್ತದೆ.
ಈಗ ಈ ವೆಬ್ಸೈಟ್ನಲ್ಲಿ ನೀವು ಪ್ಯಾನ್ ಕಾರ್ಡ್ ಗಾಗಿ ಅನ್ವಯಿಸಿ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
ಈ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡ ನಂತರ ಅಲ್ಲಿ ಕೇಳಲಾದ ಎಲ್ಲಾ ಪ್ರಮುಖ ಮಾಹಿತಿಗಳನ್ನು ನಮೂದಿಸಿ.
ನೀವು ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸುವಾಗ ಅಲ್ಲಿ A49 ಫಾರಂ ಅನ್ನು ಆಯ್ಕೆ ಮಾಡಿಕೊಳ್ಳಿ.
ಈಗ ಅಲ್ಲಿ ನೀವು ಆ ಫಾರಂನಲ್ಲಿ ಕೇಳಲಾದ ಎಲ್ಲಾ ಪ್ರಮುಖ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ.
ನಂತರ ಅಲ್ಲಿ ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
ಇದಾದ ನಂತರ ನಿಮಗೆ ಅಲ್ಲಿ ನಿಗದಿಪಡಿಸಲಾದ ಶುಲ್ಕವನ್ನು ಪಾವತಿ ಮಾಡಲು ಕೇಳಲಾಗುತ್ತದೆ.
ಶುಲ್ಕ ಪಾವತಿಸಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
ಕೊನೆಯದಾಗಿ ನೀವು ಅರ್ಜಿ ಸಲ್ಲಿಸಿದ ಫಾರಂ ಅನ್ನು ತೆಗೆದುಕೊಂಡು ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಇಮೇಲ್ ಐಡಿಗೆ ಹಾಗೂ ನಿಮ್ಮ ಮನೆಗೆ ಪೋಸ್ಟ್ ಮುಖಾಂತರ ಪಾನ್ ಕಾರ್ಡ್ ಬಂದು ತಲುಪುತ್ತದೆ.