ಧಾರವಾಡ: ಹುಬ್ಬಳ್ಳಿಯ ಸಿದ್ದಾರೂಢರು, ಗರಗದ ಮಡಿವಾಳಪ್ಪನವರು, ನವಲಗುಂದದ ಅಜಾತ ನಾಗಲಿಂಗ ಸ್ವಾಮೀಜಿ, ಉಣಕಲ್ಲಿನ ಸಿದ್ದಪ್ಪಜ್ಜನವರು, ಸಂತ ಶಿಶುನಾಳ ಶರೀಫ ಶಿವಯೋಗಿಗಳು ಹಾಗೂ ಗುರುನಾಥಾರೂಢರ ಆರು ಉತ್ಸವ ಮೂರ್ತಿಗಳು ಹಾಗೂ ಆರು ಅಂಬಾರಿಗಳನ್ನು ಮನೋಜಕುಮಾರ ಗದಗಿನ ಎಂಬುವವರು ನಿರ್ಮಿಸಿಕೊಟ್ಟಿದ್ದು, ಆ ಮೂರ್ತಿಗಳ ಸಮೇತ ಅಂಬಾರಿ ಮೆರವಣಿಗೆಯ ಸಂಗಮ ರಥಯಾತ್ರೆ ಧಾರವಾಡ ಜಿಲ್ಲೆಯ 62 ಹಳ್ಳಿಗಳಲ್ಲಿ ಸಂಚರಿಸುತ್ತಿದೆ.
ಈ ಸಂಗಮ ರಥಯಾತ್ರೆ ಸೋಮವಾರ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದು ತಲುಪಿತು. ಅಂಬಾರಿ ಸಮೇತ ಸಿದ್ದಾರೂಢರ ಸಮಕಾಲೀನರಾದ ಆರೂ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್ಗಳಿಗೆ ಉಪ್ಪಿನ ಬೆಟಗೇರಿ ಗ್ರಾಮದ ಹಿರಿಯರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಕರಡಿ ಮಜಲು, ಭಜನೆ ಮೇಳ ಹಾಗೂ ಕುಂಭ ಮೇಳದೊಂದಿಗೆ ಆರೂ ಮೂರ್ತಿಗಳನ್ನು ಭವ್ಯ ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಸಂಗಮ ರಥಯಾತ್ರೆ ಸಂಚರಿಸಿ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಬಂದು ತಲುಪಿ ಅಲ್ಲಿಂದ ಲೋಕೂರು ಗ್ರಾಮಕ್ಕೆ ತೆರಳಿತು.
Free Gas Scheme: ಈ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ
ಸಿದ್ದಾರೂಢರು ಹಾಗೂ ಅವರ ಸಮಕಾಲೀನರನ್ನು ಪರಿಚಯಿಸುವ ದೃಷ್ಟಿಯಿಂದ ಸಿದ್ದಾರೂಢರು ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಈ ಸಂಗಮ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಧಾರವಾಡ ಜಿಲ್ಲೆಯ 62 ಹಳ್ಳಿಗಳಲ್ಲಿ ಸಂಚರಿಸಲಿದೆ.
ಒಟ್ಟು 24 ದಿನಗಳ ಕಾಲ ಈ ಸಂಗಮ ರಥಯಾತ್ರೆ ಸಂಚರಿಸಿ, ಕೊನೆ ಡಿ.8 ರಂದು ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ತೆರಳಿ ಮುಕ್ತಾಯಗೊಳ್ಳಲಿದೆ. ಮನೋಜಕುಮಾರ ಗದಗಿನ ಎಂಬುವವರು ಈ ಟ್ರಸ್ಟ್ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಈ ಸಂಗಮ ರಥಯಾತ್ರೆಯ ಆಯೋಜಕರೂ ಆಗಿದ್ದಾರೆ. 24 ದಿನಗಳ ಕಾಲ ಈ ಉತ್ಸವ ಮೂರ್ತಿಗಳು ಧಾರವಾಡ ಜಿಲ್ಲೆಯ 62 ಹಳ್ಳಿಗಳಲ್ಲಿ ಸಂಚರಿಸಿ ಸಿದ್ದಾರೂಢರ ಸಮಕಾಲೀನರ ಮಹತ್ವಗಳನ್ನು ಸಾರಲಿವೆ.