ಹುಬ್ಬಳ್ಳಿ: ಯುವ ಉದ್ಯಮಿ ಮೇ. ಅಶ್ವಾ ಎನರ್ಜಿ ಪ್ರೈ.ಲಿ. ಕಂಪನಿಯ ಮ್ಯಾನೇಜಿಂಗ ಡೈರೆಕ್ಟರ ಮತ್ತು ಮೆ. ವಾಲಟೆಕ್ ಕಾರ್ಪೊರೇಶನ್ ಕಂಪನಿಯ ಮ್ಯಾನೇಜಿಂಗ್ ಪಾಲುದಾರರಾದ ಭರತ ಬಸವರಾಜ ಬೊಮ್ಮಾಯಿಯವರು ಇದೇ ಡಿಸೆಂಬರ್ 03 ರಿಂದ 05 ರವರೆಗೆ ಜರ್ಮನಿಯ ಡುಸೆಲ್ಡಾರ್ಫ ನಲ್ಲಿ ನಡೆಯುವ ವಾಲ್ವ ವರ್ಲ್ಡ ಎಕ್ಸಪೋ 2024, 13ನೇ ಅಂತರಾಷ್ಟ್ರೀಯ ವಾಲ್ವ ವರ್ಲ್ಡ ಎಕ್ಸಪೊ ಎಂಡ್ ಕಾನ್ನರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ.
ವಾಲಟೆಕ್ ಕಾರ್ಪೊರೇಶನ್ ಕಂಪನಿಯನ್ನು ಹಾಲಿ ಸಂಸದರಾದ ಹಾಗು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು 1991 ರಲ್ಲಿ ಉತ್ತಮ ಗುಣಮಟ್ಟದ ವಾಲ್ವಗಳನ್ನು ಪೂರೈಸುವ ಧೈಯದೊಂದಿಗೆ ಆರಂಭಿಸಿದರು.
Free Gas Scheme: ಈ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ
ಹುಬ್ಬಳ್ಳಿ-ಧಾರವಾಡ ಪ್ರದೇಶವು ಕೈಗಾರಿಕಾ ವಾಲ್ವ ಹಬ್ ಎಂದು ಗುರುತಿಸಲಾಗಿದ್ದು ವಾಲಟಕ ಕಾರ್ಪೋರೇಶನ್ ಕಂಪನಿ ಕೂಡ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಕಂಪನಿಯು ಎಲ್ಲಾ ರೀತಿಯ ಹಾಗೂ ಎಲ್ಲಾ ಗಾತ್ರದ ಕೈಗಾರಿಕಾ ವಾಲ್ವಗಳನ್ನು ಒಳಗೊಂಡಂತೆ ಗೇಟ್, ಗ್ಲೋಬ್, ಸ್ವಿಂಗ್ ಚೆಕ್, ಬಟರಪ್ಪ ಮತ್ತು ಬಾಲ್ ವಾಲ್ವಗಳನ್ನು ಉತ್ಪಾದಿಸುವಲ್ಲಿ ನಿರತವಾಗಿದೆ ಎಂದು ಕಂಪನಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.