ಪಶ್ಚಿಮ ಆಫ್ರಿಕಾದ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್ ಝೆರೆಕೋರೆಯಲ್ಲಿ ಭಾನುವಾರ ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ ನಡೆದಿದ್ದು ಘಟನೆಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿರಬಹುದು ಎಂದು ಸ್ಥಳೀಯ ವೈದ್ಯರೋರ್ವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
2021ರ ದಂಗೆಯ ನಂತರ ಅಧಿಕಾರ ವಹಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿಯಲ್ಲಿ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಪಂದ್ಯದ ತೀರ್ಪಿಗೆ ಸಂಬಂಧಿಸಿ ವಿವಾದವಾಗಿ ಹಿಂಸಾಚಾರ ಸ್ಫೋಟಗೊಂಡಿದೆ. ಬಳಿಕ ಎನ್ ಝೆರೆಕೋರೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.