ವಿಜಯ್ ಸೇತುಪತಿ ನಟನೆಯ ಈ ವರ್ಷ ಜೂನ್ನಲ್ಲಿ ಬಿಡುಗಡೆ ಆದ ತಮಿಳಿನ ‘ಮಹಾರಾಜ’ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ‘ಮಹಾರಾಜ’ ಸಿನಿಮಾ ಚೀನಾದಲ್ಲೂ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಭಾರತದ ಕೆಲವು ಸಿನಿಮಾಗಳನ್ನು ಬಿಡುಗಡೆ ಮಾಡಲು ಚೀನಾದಲ್ಲಿ ಅವಕಾಶ ನೀಡಲಾಗುತ್ತಿದೆ. ಅಂತೇಯೇ ಇತ್ತೀಚೆಗೆ ‘ಮಹಾರಾಜ’ ಸಿನಿಮಾವನ್ನು ಚೀನಾದಲ್ಲಿ ರಿಲೀಸ್ ಮಾಡಲಾಗಿದ್ದು, ಅಲ್ಲಿನ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಮಹಾರಾಜನಿಗೆ ಚೀನಾ ಮಂದಿ ಫಿದಾ ಆಗಿದ್ದಾರೆ.
ಚೀನಾದಲ್ಲಿ ‘ಮಹಾರಾಜ’ ಸಿನಿಮಾ ಬರೋಬ್ಬರಿ 49 ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗಿದೆ. ನವೆಂಬರ್ 29ರಂದು ತೆರೆಕಂಡ ಈ ಚಿತ್ರಕ್ಕೆ ಪ್ರೀಮಿಯರ್ ಶೋನಿಂದಲೇ 5.49 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೊದಲ ದಿನ 4.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ ಎರಡನೇ ದಿನ ಬರೋಬ್ಬರಿ 9.30 ಕೋಟಿ ರೂಪಾಯಿ ಗಳಿಸಿತು.
ಎರಡೇ ದಿನದಲ್ಲಿ ‘ಮಹಾರಾಜ’ ಸಿನಿಮಾಗೆ ಚೀನಾದ ಬಾಕ್ಸ್ ಆಫೀಸ್ನಲ್ಲಿ 19.30 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಅಂದಾಜು 20 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ ಮಹಾರಾಜ ಸಿನಿಮಾ ವಿಶ್ವಾದ್ಯಂತ 125 ಕೋಟಿ ರೂಪಾಯಿಗೂ ಆಧಿಕ ಕಲೆಕ್ಷನ್ ಆಗಿತ್ತು. ಒಟಿಟಿಯಲ್ಲೂ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಂಡಿದೆ.