ಹುಬ್ಬಳ್ಳಿ: ಸರ್ಕಾರ ಈರುಳ್ಳಿ ಬೆಳೆಗಾರರಿಗೆ ೬೦ ಸಾವಿರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಎಂ.ಸಿದ್ದೇಶ ಆಗ್ರಹಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗ್ತಿದ್ದೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಪಸಕ್ತ ವರ್ಷ ರಾಜ್ಯದಲ್ಲಿ ಒಟ್ಟು ೧.೩೫ ಲಕ್ಷ ಎಕರೆ ಈರುಳ್ಳಿ ಬೆಳೆ ಹಾನಿಯಾಗಿದೆ. ಪ್ರತಿ ಎಕರೆಗೆ ಕನಿಷ್ಠ ಕ್ವಿಂಟಲ್ ಬೆಳೆಯೂ ಬರುತ್ತಿಲ್ಲ. ಆದ್ದರಿಂದ ಸಂಕಷ್ಟಕ್ಕಿಡಾದ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದರು.
ಅಕಾರಿಗಳು ಸರ್ವೇ ನಡೆಸಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಪರಿಹಾರ ಹಣ ಬಂದಿಲ್ಲ. ಈರುಳ್ಳಿ ಬೆಳಗಾರ ರೈತರಿಗೆ ಒಂದು ವರ್ಷಕ್ಕೆ ಕೇಂದ್ರ ಸರ್ಕಾರವು ೧೫ ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈರುಳ್ಳಿ ಸಂಗ್ರಹಣಾ ಘಟಕಗಳನ್ನು ನಿರ್ಮಾಣ ಮಾಡಬೇಕು. ಬೆಳೆ ವಿಮೆ ಇದುವರೆಗೆ ಸಿಕ್ಕಿಲ್ಲ. ವಿಮಾ ಕಂಪನಿಯವರು ಶೀಘ್ರ ವಿಮಾ ಮೊತ್ತ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ರಾಜ್ಯ ಯುವ ಮೋಚಾ ಅಧ್ಯಕ್ಷರನ್ನಾಗಿ ಪ್ರಮೋದ ವಿರುಪಾಕ್ಷ ತಗ್ಗಿ ಲೋಕಾಪುರ ಅವರನ್ನು ನೇಮಕ ಮಾಡಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಹಲಗೇರ, ಸದಸ್ಯರಾದ ತಿಪ್ಪಣ್ಣ ತಲ್ಲೂರ, ವೀರಣ್ಣ ಕಾಳಗಿ, ಲೋಕಣ್ಣ ಉಳ್ಳಾಗಡ್ಡಿ, ದೇಶಪಾಂಡೆ, ನಿತಿನ್ ಮಡಿವಾಳರ ಇದ್ದರು.