ವಾಟ್ಸಾಪ್ ನಲ್ಲಿ ಬಂದ ನೋಟಿಸ್ ನಾನು ನಂಬಲ್ಲ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನನಗಿನ್ನೂ ಅಧಿಕೃತವಾಗಿ ನೋಟಿಸ್ ಬಂದಿಲ್ಲ. ವಾಟ್ಸಪ್ನಲ್ಲಿ ಬಂದಿದ್ದನ್ನು ನಾನು ನಂಬುವುದಿಲ್ಲ ಎಂದರು.
ಬಿಜೆಪಿಯ ಶಿಸ್ತು ಸಮಿತಿಯಿಂದ ಬಂದಂತಹ ಶೋಕಾಸ್ ನೋಟಿಸ್ ಅನ್ನು ಯತ್ನಾಳ್ ಟ್ವೀಟ್ ಮಾಡಿದ್ದರು. ಆದರೆ ಈಗ ನೋಟಿಸ್ನ ಸತ್ಯಾಸತ್ಯತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದು ವಿಜಯೇಂದ್ರ ಕೆಲಸ ಇರಬಹುದು. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ರಿಜಿಸ್ಟ್ರರ್ಡ್ ಪೋಸ್ಟ್ ಮೂಲಕ ಬರಬೇಕು ಎಂದು ತಿರುಗೇಟು ನೀಡಿದ್ದಾರೆ.
ಬಿವೈ ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್ ಭಿಕ್ಷೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಯಾರು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮನೆಗೆ ನಾನು ಹೋಗಿಲ್ಲ ಎಂದು ಮತ್ತೊಮ್ಮೆ ಹೇಳಿದರು