ಹೈದರಾಬಾದ್: ಕಳೆದ ಡಿಸೆಂಬರ್ 1ರಂದು ಆತ್ಮಹತ್ಯೆಗೆ ಶರಣಾಗಿರುವ ಧಾರಾವಾಹಿ ನಟಿ ಶೋಬಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ನಡೆದಿದೆ. ಇಂದು ಹೈದರಾಬಾದ್ ನ ಆಸ್ಪತ್ರೆಯಲ್ಲಿ ಶೋಭಿತಾ ಮರಣೋತ್ತರ ಪರೀಕ್ಷೆ ನಡೆದಿದ್ದು, ಆತ್ಮಹತ್ಯೆಯಿಂದಲೇ ಶೋಬಿತ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಶೋಭಿತಾ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
shobitha shivanna: ಇಷ್ಟವಿಲ್ಲದ ಮದುವೆ.. ಚಿತ್ರರಂಗದಿಂದ ದೂರ: ಬ್ರಹ್ಮಗಂಟು ನಟಿಯ ಅಂತ್ಯಕ್ಕೆ ನಿಜ ಕಾರಣವೇನು..?
ಕಳೆದ ಡಿ.1ರಂದು ಶೋಭಿತಾ ತಮ್ಮ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದರು. ಆದರೆ ಡಿ.2 ರಂದು ಅವರ ಸಾವಿನ ಬಗ್ಗೆ ಗೊತ್ತಾಗಿತ್ತು. ಸದ್ಯ ಪೊಲೀಸರ ತನಿಖೆಯನ್ನು ತೀವ್ರಗೊಳಿಸಿದ್ದರಯ. ಕುಟುಂಬಸ್ಥರ ದೂರಿನ ಮೇರೆಗೆ ತನಿಖೆ ನಡೆಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ದಾಂಪತ್ಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಶೋಭಿತಾ ಪತಿ ಸುಧೀರ್ ರೆಡ್ಡಿ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಶೋಭಿತಾ ನೆರೆಹೊರೆಯವರನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ.