ಶೋಭಿತಾ ಶಿವಣ್ಣ.. ಕನ್ನಡದ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಹೆಸರು ಮಾಡಿದ ನಟಿ.. ಕನ್ನಡದಲ್ಲಿ ಸಿನಿಮಾಗಿಂತಲೂ ಸೀರಿಯಲ್ ನಿಂದಲೇ ಮನೆಮಾತಾಗಿದ್ದ ನಟಿ ಶೋಭಿತಾ ಶಿವಣ್ಣ ದುಡುಕಿನ ನಿರ್ಧಾರ ಮಾಡಿದ್ದಾರೆ. ಇನ್ನೂ ಬಾಳಿ ಬದಕುಬೇಕಿದ್ದ ವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ..
ಶೋಭೀತಾ ಇಷ್ಟವಿಲ್ಲದೇ ಮದುವೆ ಆಗಿದ್ರಾ.. ಮದುವೆ ಆದ ಎರಡೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ.. ಶೋಭಿತಾ ಸೂಸೈಡ್ ನೋಟ್ ನಲ್ಲಿ ಸಿಕ್ಕಿದ್ದೇನು.. ಅದರ ಬಗ್ಗೆ ಹೇಳ್ತೇನಿ.ನೀವಿನ್ನು ನಮ್ಮ ಎಐಎನ್ ಕನ್ನಡ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕೈಬ್ ಮಾಡಿಲ್ಲ ಅಂದರೆ ಈ ಕೂಡಲೇ ಸಬ್ ಸ್ಕ್ರೈಬ್ ಮಾಡಿ.. ತಾಜಾ ಸುದ್ದಿಗಳ ಅಪ್ಡೇಟ್ ಪಡೆಯಿರಿ.. ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ, ಅಂತಾರಾಷ್ಟ್ರೀಯ ಸುದ್ದಿಗಳು ನಿಮಗಾಗಿ..
ಕನ್ನಡ ಕಿರುತೆರೆಯಲ್ಲಿ ಬ್ರಹ್ಮಗಂಟು ಧಾರವಾಹಿ ಜನಮೆಚ್ಚುಗೆ ಪಡೆದಿತ್ತು. ಇದೇ ಧಾರವಾಹಿಯಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ಸಹ ಮನೆ ಮಾತಾಗಿದ್ದರು. ಕನ್ನಡದ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಹಲವು ಅವಕಾಶಗಳು ಸಹ ಬಂದವು.. ಎರಡ್ಲೊಂದಾ ಮೂರು, ಎಟಿಎಂ ಸೇರಿದಂತೆ ಹಲವು ಚಿತ್ರಗಳ ಜೊತೆಗೆ ಒಂದಷ್ಟು ಸೀರಿಯಲ್ ಗಳಲ್ಲೂ ನಟಿಸಿದರು.. ಆದರೆ ಇದಕ್ಕಿದ್ದಂತೆ ಶೋಭೀತಾ ಚಿತ್ರರಂಗದಿಂದ ದೂರಾದರೂ. ಇದಕ್ಕೆ ಕಾರಣ ಅವರ ಮದುವೆ..
ನಿಮಗೆ ಗೊತ್ತೆ..? ವೀಸಾ ಬೇಡ, ಭಾರತೀಯ Passport ಒಂದಿದ್ದರೆ ಸಾಕು ಈ ದೇಶಗಳಿಗೆ ಹೋಗಬಹುದು!
ಎಸ್.. ಶೋಭಿತಾ ಶಿವಣ್ಣ ಎರಡು ವರ್ಷಗಳ ಹಿಂದೆ ಅಂದರೆ 2023 ರಲ್ಲಿ ಹೈದರಾಬಾದ್ ಮೂಲದ ಸಾಪ್ಟ್ ವೇರ್ ಇಂಜಿನಿಯರ್ ಸುಧೀರ್ ರೆಡ್ಡಿ ಅವರ ಕೈಹಿಡಿದು, ಹೈದರಾಬಾದ್ ನಲ್ಲೇ ಸೆಟಲ್ ಆಗಿದ್ದರು.. ಇಷ್ಟವಿಲ್ಲದಿದ್ದರೂ ಸಹ ಮನೆಯವರ ಇಚ್ಚೆಯಂತೆ ಮದುವೆಯಾಗಿ, ನಟನೆಯಿಂದ ದೂರವುಳಿದಿದ್ದರು. ಆದರೆ ಇದೀಗ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್ ನಲ್ಲಿರುವ ತಮ್ಮಮನೆಯಲ್ಲೇ ಶೋಭಿತಾ ಸೂಸೈಡ್ ಮಾಡಿಕೊಂಡಿದ್ದಾರೆ..
ಶೋಭಿತಾ ಮನೆಯಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ everything perfect.. If u want to suicide. U can do it.. ಎಂದು ಬರೆದಿಟ್ಟಿದ್ದಾರೆ.. ಎಲ್ಲವೂ ಸರಿಯಾಗಿದ್ದರೆ ಶೋಭಿತಾ ಸೂಸೈಡ್ ಯಾಕೆ ಮಾಡಿಕೊಂಡರು, ಡೆತ್ ನೋಟ್ ನಲ್ಲಿರುವ ಮಾತಿನ ಮರ್ಮವೇನು ಅನ್ನೋದನ್ನು ಪೊಲೀಸರು ತನಿಖೆ ಮಾಡ್ತಿದ್ದಾರೆ.
ಶೋಭಿತಾ ಪತಿ ಸುಧೀರ್ ರೆಡ್ಡಿ ಒಂದು ಮ್ಯಾರೇಜ್ ಮ್ಯಾಟ್ರಿಮೊನಿಯಲ್ ಮೂಲಕ ಪ್ರಪೋಸಲ್ ಕಳುಹಿಸಿದರು. ಎನ್ನಲಾಗಿದೆ. ಅದೂ ಅಲ್ಲದೇ ಶೋಭಿತಾ ಅವರ ಪತಿಯ ಸಂಬಂಧಿಕರಾಗಿದ್ದು, ಅಕ್ಕನ ಮತ್ತು ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಶೋಭಿತಾ ಮದುವೆಯಾಗಿದ್ದರು ಎನ್ನುವ ಮಾತು ಇದೆ. ಹತ್ತಿರದವರ ಪ್ರಕಾರ ಶೋಭಿತಾ ದಾಂಪತ್ಯ ಜೀವನ ಚೆನ್ನಾಗಿತ್ತು.. ಇತ್ತೀಚಿಗೆ ಪತಿ ಪತ್ನಿ ಇಬ್ಬರೂ ಗೋವಾ ಪ್ರವಾಸಕ್ಕೆ ಕೂಡ ಹೋಗಿದ್ರು ಎನ್ನಲಾಗ್ತಿದೆ.
ಸದ್ಯ ಪೊಲೀಸರು ಶೋಭಿತಾ ಪತಿ ಸುಧೀರ್ ರೆಡ್ಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಶೋಭಿತಾ ಅವರ ಎರಡು ಮೊಬೈಲ್ ಗಳ ವಶಕ್ಕೆ ಪಡೆದಿದ್ದು, ಕಳೆದ ಕೆಲವು ದಿನಗಳಿಂದ ಶೋಭಿತಾ ಯಾರ್ಯಾರ ಜೊತೆಗೆ ಮಾತನಾಡಿದ್ರು ಅನ್ನೋದನ್ನು ವಿಚಾರಣೆ ಮಾಡ್ತಿದ್ದಾರೆ. ಜೊತೆಗೆ ಡೆತ್ ನೋಟ್ ಬಗ್ಗೆಯೂ ಪರಿಶೀಲನೆ ಮಾಡ್ತಿದ್ದಾರೆ. ಒಟ್ಬಲ್ಲಿ ಕೇವಲ ಮೂವತ್ತೆ ವರ್ಷಕ್ಕೆ ಶೋಭಿತಾ ತಮ್ಮ ಬದುಕಿನ ಪಯಣವನ್ನೇ ಮುಗಿಸಿದ್ದಾರೆ. ಅವರ ಸಾವಿಗೆ ನಿಜ ಕಾರಣವೇನು ಅನ್ನೋದು ಪೊಲೀಸರ ತನಿಖೆಯಿಂದ ಮಾತ್ರ ಬಯಲಾಗಬೇಕಿದೆ.