ಪುಷ್ಪಾ 2 ಸಿನಿಮಾ ಇದೇ ಡಿಸೆಂಬರ್ 5ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಪುಷ್ಪಾ 2 ಸಿನಿಮಾದ ಪ್ರಮೋಷನ್ ಭರ್ಜರಿಯಾಗಿದೆ. ಇದೀಗ ರಿಲೀಸ್ಗೂ ಮುನ್ನವೇ ಪುಷ್ಪ 2 ಚಿತ್ರ ದಾಖಲೆ ಬರೆದಿದೆ. ಈ ಚಿತ್ರದ ಟಿಕೆಟ್ ಖರೀದಿಗೆ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಕೇವಲ 10 ಗಂಟೆಗಳಲ್ಲಿ ಚಿತ್ರದ 55 ಸಾವಿರ ಟಿಕೆಟ್ ಸೇಲ್ ಆಗಿದೆ.
ಸ್ಟಾರ್ ಜೋಡಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಟಿಸಿರುವ ‘ಪುಷ್ಪ 2’ (Pushpa 2) ಸಿನಿಮಾ ನೋಡಲು ಎಲ್ಲರೂ ಕೌತುಕದಿಂದ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಸಿನಿಮಾ ರಿಲೀಸ್ಗೂ ಮುನ್ನವೇ 10 ಗಂಟೆಗಳಲ್ಲಿ 55 ಸಾವಿರ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇನ್ನೂ ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ‘ಪುಷ್ಪ 2’ ಹಿಂದಿ ವರ್ಷನ್ ನೋಡಲು 2000 ಸಾವಿರ ರೂ. ಟಿಕೆಟ್ ದರ ಹೆಚ್ಚಿಸಲಾಗಿದೆ.ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣಿಸುತ್ತಿದೆ. ಆದರೆ, ’ಪುಷ್ಪ-2′ ಚಿತ್ರದ ಟಿಕೆಟ್ ಬುಕ್ಕಿಂಗ್ ಎಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಓಪನ್ ಆಗಿಲ್ಲ.
Kitchen Hacks: ಚಳಿಗಾಲದಲ್ಲಿ ಮೊಸರು ಸರಿಯಾಗಿ ಆಗುತ್ತಿಲ್ವಾ..? ಚಿಂತೆ ಬಿಡಿ, ಈ ಟಿಪ್ಸ್ ಪಾಲಿಸಿ
ಆ ವಿಷಯದಲ್ಲಿ ತೆಲಂಗಾಣದಲ್ಲಿಯೇ ಟಿಕೆಟ್ ಬುಕ್ಕಿಂಗ್ ಇನ್ನು ಪೂರ್ಣ ಪ್ರಮಾಣದಲ್ಲಿ ಓಪನ್ ಆಗಿಲ್ಲ. ಆದರೆ ತೆಲಂಗಾಣದಲ್ಲಿ ಡಿ.4ರಂದು ರಾತ್ರಿ 9:30ಕ್ಕೆ ಒಂದು ಸ್ಪೆಷಲ್ ಶೋವನ್ನು ಚಿತ್ರತಂಡ ಆಯೋಜಿಸಿದೆ. ಈ ಸ್ಪೆಷಲ್ ಶೋಗೆ ಟಿಕೆಟ್ ದರ 800 ರೂ. ಮಾಡಿದ್ದಾರೆ. ಇನ್ನೂ ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ, ಅನಸೂಯ, ಫಹಾದ್ ಫಾಸಿಲ್, ಶ್ರೀಲೀಲಾ ಸೇರಿದಂತೆ ಅನೇಕರು ನಟಿಸಿದ್ದಾರೆ.