ದೆಹಲಿ: ಶಿಸ್ತು ಸಮಿತಿ ನೋಟಿಸ್ ಬಗ್ಗೆಯೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಶೋಕಾಸ್ ನೋಟಿಸ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ , ನೋಟಿಸ್ ಪ್ರತಿ ನಕಲಿ ಎಂಬದು ನನಗೆ ಅನುಮಾನವಿದೆ ಎಂದಿದ್ದಾರೆ. ಕಳೆದ ಬಾರಿಯೂ ನನಗೆ ನೋಟಿಸ್ ಕೊಟ್ಟಿದ್ದರು. ಉತ್ತರ ಕೊಡದಿದ್ದರೂ ನನ್ನ ಮೇಲೆ ಏನೂ ಕ್ರಮಕೈಗೊಂಡಿರಲಿಲ್ಲ. ಇ-ಮೇಲ್ ಅಥವಾ ಪೋಸ್ಟ್ನಲ್ಲಿ ನನಗೆ ನೋಟಿಸ್ ಬಂದಿಲ್ಲ ವಿಜಯಂದ್ರನೇ ನಕಲಿ ನೋಟಿಸ್ ಮಾಡಿಸಿರಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಆರೋಪಿಸಿದ್ದಾರೆ. ಯಡಿಯೂರಪ್ಪ ಸಹಿಯನ್ನೇ ವಿಜಯೇಂದ್ರ ನಕಲಿ ಮಾಡಿಸಿದ್ದು, ನೋಟಿಸ್ ಗೆ ಸೂಕ್ತ ಉತ್ತರ ಕೊಡುತ್ತೇನೆ ಎಂದರು.
ಹೈಕಮಾಂಡ್ ಅಂಗಳದಲ್ಲಿ ರಾಜ್ಯ ಬಿಜೆಪಿಯ ಬಣ ಬಡಿದಾಟ, ದೆಹಲಿಗೆ ಹಾರಿದ ಯತ್ನಾಳ್
ಬಿ.ವೈ.ವಿಜಯೇಂದ್ರ ಏನೂ ಕೆಲಸ ಮಾಡುತ್ತಿಲ್ಲ. ವಿಜಯೇಂದ್ರನದ್ದು ಬರೀ ಹೊಂದಾಣಿಕೆ ರಾಜಕಾರಣವೇ ಆಯ್ತು. ಡಿ.ಕೆ.ಶಿವಕುಮಾರ್ ಜೊತೆ ವಿಜಯೇಂದ್ರ ಹೊಂದಾಣಿಕ ರಾಜಕಾರಣ ಮಾಡುತ್ತಿದ್ದಾನೆ. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಸೇರಿ ಅನೇಕ ಪ್ರಕರಣಗಳಿವೆ. ಬಿಎಸ್ವೈ ವಿರುದ್ಧ ಜಾಮೀನು ರಹಿತ ವಾರಂಟ್ಗಳು ಕೂಡ ಇವೆ. ಸಿದ್ದರಾಮಯ್ಯಗೆ ಯಡಿಯೂರಪ್ಪ ಹೆದರಬೇಕು, ನಾನು ಹೆದರಲ್ಲ. ಭ್ರಷ್ಟಾಚಾರ ವಂಶವಾದದ ವಿರುದ್ಧ ನನ್ನ ಹೋರಾಟ ಅಚಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.