ಬೆಂಗಳೂರು: ಫೆಂಗಲ್ ಚಂಡಮಾರುತದ ಎಫೆಕ್ಟ್ ನಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ.ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದಿದ್ದು, ಭಾರೀ ತಪ್ಪಿದ ಅವಾಂತರ ತಪ್ಪಿದೆ. ಬೆಂಗಳೂರಿನ ಜೆಜೆ ನಗರದಲ್ಲಿ ಮನೆ ಗೋಡೆ ಕುಸಿದಿದೆ.ಬೆಂಗಳೂರಿನ ಜೆಜೆ ನಗರದಲ್ಲಿ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಇಬ್ಬರು ವೃದ್ದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕ ಕಸ್ತೂರಿ, ತಮ್ಮ ಲೋಕೇಶ್ ಮನೆಯಲ್ಲಿದ್ದರು. ಕಳೆದ ರಾತ್ರಿ 12ಗಂಟೆ ಸುಮಾರಿಗೆ ಗೋಡೆ ಏಕಾಏಕಿ ಕುಸಿದಿದೆ. ವೃದ್ದರ ಮೇಲೆ ಕುಸಿದಿದ್ದ ಛಾವಣಿ ಕುಸಿದಿದ್ದು, ಕೂಡಲೇ ಅಕ್ಕಪಕ್ಕದಲ್ಲಿದ್ದವರು ಇಬ್ಬರು ವೃದ್ದರ ರಕ್ಷಣೆ ಮಾಡಿದ್ದಾರೆ. ಸದ್ಯ ಇಬ್ಬರಿಗು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.
ಫೆಂಗಲ್ ಚಂಡಮಾರುತದ ಎಫೆಕ್ಟ್: ಮಳೆಗೆ ಮನೆ ಗೋಡೆ ಕುಸಿತ, ಇಬ್ಬರು ಪ್ರಾಣಾಪಾಯದಿಂದ ಪಾರು
By Author AIN