ಫುಟ್ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ ನಡುವೆ ಶುರುವಾಗ ಘರ್ಷಣೆಗೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಗಿನಿಯಾದ 2ನೇ ಅತಿದೊಡ್ಡ ನಗರವಾದ ಎನ್ಜೆರೆಕೋರ್ನಲ್ಲಿನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
2021ರ ದಂಗೆಯ ನಂತರ ಅಧಿಕಾರ ವಹಿಸಿಕೊಂಡು ತನ್ನನ್ನು ತಾನು ಅಧ್ಯಕ್ಷ ಎಂದು ಘೋಷಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ರೆಫ್ರಿ ನೀಡಿದ ವಿವಾದಿತ ತೀರ್ಪು ಅಭಿಮಾನಿಗಳ ಘರ್ಷಣೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.ಘಟನೆ ನಂತರ ಇಲ್ಲಿನ ಸ್ಥಳೀಯ ಆಸ್ಪತ್ರೆ ಮುಂಭಾಗ ಹೆಣಗಳ ರಾತ್ರಿಯೇ ಇತ್ತು, ಕೆಲವರ ದೇಹಗಳನ್ನ ಆಸ್ಪತ್ರೆಯ ವರಾಂಡದಲ್ಲಿ ಇಡಲಾಗಿತ್ತು.
Ganga Kalyana Scheme: ಕೃಷಿ ಜಮೀನಿಗೆ ಉಚಿತ ಬೋರ್ʼವೆಲ್ ಬೇಕೇ..? ಹಾಗಿದ್ರೆ ಹೀಗೆ ಅರ್ಜಿ ಸಲ್ಲಿಸಿ
100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ ಎನ್ನಲಾಗಿದೆ. ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ರೆಫ್ರಿ ತೀರ್ಪಿನಿಂದ ರೊಚ್ಚಿಗೆದ್ದು ಘರ್ಷಣೆಗೆ ಇಳಿದಿದ್ದರು. ಇದು ದೊಡ್ಡ ದಂಗೆಯಾಗಿ ಮಾರ್ಪಟ್ಟಿತು. ಈ ವೇಳೆ ಸಮೀದಲ್ಲಿದ್ದ ಪೊಲೀಸ್ ಠಾಣೆಯನ್ನೂ ಧ್ವಂಸಗೊಳಿಸಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.