ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ “ನಗರ ಮೀಟರ್” ಹೊಸ ಆ್ಯಪ್ ಬಿಡುಗಡೆ ಆಗಿದ್ದು, ಓಲಾ, ಊಬರ್, ರ್ಯಾಪಿಡೋಗೆ ಸೆಡ್ಡು ಹೊಡೆಯೋ ಜೋಶ್ ನಲ್ಲಿದೆ ನೂತನ ಆ್ಯಪ್.
ನಾನು ಸುಮ್ಮನೆ ಕುಳಿತುಕೊಳ್ಳೋ ಮಗನಲ್ಲ: ಸೋಲಿನ ಬಗ್ಗೆ ನಿಖಿಲ್ ಖಡಕ್ ಮಾತು!
ಓಲಾ, ಊಬರ್ ಕಂಪನಿಗಳು ಮಳೆ ಬಂದಾಗ ಒಂದು ದರ, ಪೀಕ್ ಅವರ್ನಲ್ಲಿ ಒಂದು ದರ ಎಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಇಬ್ಬರು ಯುವಕರು ನಗರ ಮೀಟರ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ಆರ್ಟಿಒ ರೂಲ್ಸ್ ಪ್ರಕಾರ ಆಟೋದಲ್ಲಿ ಎರಡು ಕಿಮೀಗೆ ಮಿನಿಮಮ್ ಚಾರ್ಜ್ 30 ರುಪಾಯಿ ನಂತರದ ಕಿಮೀಗೆ 15 ರೂಪಾಯಿ ಪಡೆದುಕೊಳ್ಳಬೇಕು. ಆದರೆ, ಈ ಅಗ್ರಿಗೇಟರ್ ಕಂಪನಿಗಳು ಮಳೆ ಬರುತ್ತಿರುವ ಸಮಯದಲ್ಲಿ ಒಂದು ದರ, ಪೀಕ್ ಅವರ್ನಲ್ಲಿ ಒಂದು ದರ ಎಂದು ಒನ್ ಟು ಡಬಲ್ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಮುಂದಾಗಿವೆ. ಇದಕ್ಕೆ ಬ್ರೇಕ್ ಹಾಕಲು ನಿರಂಜನ್ ಮತ್ತು ಶಿವು ಎಂಬ ಇಬ್ಬರು ಯುವಕರು ಸೇರಿ ಮೀಟರ್ ಆ್ಯಪ್ ಸೃಷ್ಟಿಸಿದ್ದಾರೆ. ಆಟೋ ಮತ್ತು ಕ್ಯಾಬ್ ಚಾಲಕರು ಮೀಟರ್ ಹಾಕಿಕೊಂಡು ಡ್ಯೂಟಿ ಮಾಡಬಹದು.
ಇದರಿಂದ ಅಗ್ರಿಗೇಟರ್ ಕಂಪನಿಗಳ ಕಳ್ಳಾಟಕ್ಕೆ ಇನ್ಮುಂದೆ ಬ್ರೇಕ್ ಬೀಳಬಹುದು. ಆರ್ಟಿಒ ನಿಯಮದ ಪ್ರಕಾರವೇ ನಗರ ಮೀಟರ್ ಆ್ಯಪ್ ಪ್ರಯಾಣಿಕರಿಂದ ದರವನ್ನು ಪಡೆದುಕೊಳ್ಳುತ್ತದೆ. ನಗರದ ಆರೂವರೆ ಸಾವಿರ ಆಟೋದವರು ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.