ಬೆಂಗಳೂರು:- ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚೋದು ಕಾಂಗ್ರೆಸ್ ಸರ್ಕಾರದ ಕಾನೂನು ಎಂದು CT ರವಿ ಹೇಳಿದ್ದಾರೆ.
ಫೆಂಗಲ್ ಸೈಕ್ಲೋನ್ ಎಫೆಕ್ಟ್: ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ!
ಈ ಸಂಬಂಧ ಮಾತನಾಡಿದ ಅವರು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದೇನಾ ನಿಮ್ಮ ಕಾನೂನು ಎಂದರು.
ಕಾಂಗ್ರೆಸ್ ಅವರ ಕಾನೂನು ಪಕ್ಷಪಾತದ ಕೆಲಸ ಮಾಡುತ್ತಿದೆ. ಖರ್ಗೆಯವರು ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಹುಚ್ಚು ನಾಯಿ ರೀತಿ ಹೊಡೆದು ಕೊಲ್ಲಬೇಕು ಎಂದರು. ಆಗ ದೂರು ಕ್ರಮ ಏನಾದರೂ ತೆಗೆದುಕೊಂಡರಾ? ಜಮೀರ್ ಹೇಳಿಕೆ ವಿರುದ್ಧ ನೋ ಆಕ್ಷನ್, ಗುರಪ್ಪ ನಾಯ್ಡು, ವಿನಯ್ ಕುಲಕರ್ಣಿ ವಿರುದ್ಧ ನೋ ಆಕ್ಷನ್. ಆದರೆ ಮುನಿರತ್ನ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡಿದ್ದೀರಿ. ನಿಮ್ಮ ಕಾನೂನು ರಾಜ್ಯದಲ್ಲಿ ಪಕ್ಷಪಾತವಾಗಿದೆ. ಕೆಲವರ ಬಗ್ಗೆ ನಿಮ್ಮ ಕಾನೂನು ಜಾಣ ಕುರುಡಾಗಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದೇನಾ ನಿಮ್ಮ ಕಾನೂನು? ನಾವು ಸ್ವಾಮೀಜಿ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಕಳೆದ ಜನವರಿ 26ರಂದು ಸಂವಿಧಾನ ದಿನ ಹಳೇ ಪ್ಲೇಟ್ ಪ್ಲೇ ಮಾಡಿದ್ದರು. ಬಿಜೆಪಿ, ಆರ್ಎಸ್ಎಸ್ನವರು ಯಾರು ಸ್ವಾತಂತ್ರ್ಯ ಹೋರಾಟಗಾರರು ಇರಲಿಲ್ಲ ಎಂದರು. ಸಿದ್ದರಾಮಯ್ಯಗೆ ಗೊತ್ತಿಲ್ಲ ಪಾಪ, ಹೆಡಗೇವಾರ್ ಅವರು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿದ್ದರು. ಅವರ ಜೊತೆ ಸುಭಾಷ್ ಚಂದ್ರ ಬೋಸ್ ಸಹ ಚರ್ಚೆಗೆ ಬರುತ್ತಿದ್ದರು. ಇದರ ದಾಖಲೆ ಪಬ್ಲಿಕ್ ಡೊಮೈನ್ನಲ್ಲಿ ಈಗಲೂ ಇದೆ ಎಂದರು.