ಶೋಭಿತಾ ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ ಎಂದು ಚಂದು ಗೌಡ ಹೇಳಿದ್ದಾರೆ.
ಜಾಸ್ತಿ ನೀರು ಕುಡಿದ್ರೆ ಸಣ್ಣ ಆಗ್ತಾರಾ!? ದಪ್ಪ ಇರುವವರು ನೋಡಲೇಬೇಕಾದ ಸ್ಟೋರಿ!
ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಯಾರೊಂದಿಗೂ ಅವರು ಕಷ್ಟಗಳ ಬಗ್ಗೆ ಹಂಚಿಕೊಳ್ಳುತ್ತಿರಲಿಲ್ಲ ಎಂದು ಚಂದು ಮಾತನಾಡಿದ್ದಾರೆ. ನಾನು ಶೋಭಿತಾ ಜೊತೆ 2 ಸಿನಿಮಾ ಮಾಡಿದ್ದೇನೆ. ಬೆಳಗ್ಗೆ ಅವರ ಸಾವಿನ ಸುದ್ದಿ ಗೊತ್ತಾಯ್ತು. ಇನ್ನೂ ಈ ವಿಚಾರವನ್ನು ನನಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ಜೀವನದಲ್ಲಿ ಅವರು ತುಂಬಾ ಕಷ್ಟ ನೋಡಿ ಬಂದಿದ್ದಾರೆ. ಕಷ್ಟಪಟ್ಟು ಒಂದು ಮನೆಯನ್ನು ಕಟ್ಟಿಸಿದರು ಶೋಭಿತಾ. ಆ ಮನೆಯಲ್ಲಿ ಅವರ ತಂದೆ ವಾಸ ಮಾಡಲಿಲ್ಲ ಎಂಬ ಬೇಜಾರು ಅವರಿಗಿತ್ತು. ಆ ವೇಳೆ ಅವರ ತಂದೆ ತೀರಿಕೊಂಡರು.
ಅವರ ಸಾವಿನ ವಿಚಾರ ಅನುಮಾನ ಬರೋ ಹಾಗಿದೆ. ಸುಮಾರು ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಮಾತನಾಡಿದ್ದಾರೆ. ಮದುವೆಯ ಬಳಿಕ ಅಷ್ಟೂ ಸಂಪರ್ಕ ಇರಲಿಲ್ಲ. ಅವರು ನನಗೆ 8 ವರ್ಷಗಳಿಂದ ಪರಿಚಯ, ಆದರೆ ಅವರ ಕಷ್ಟಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ದಿಢೀರ್ ಅಂತ ಯಾಕೆ ಈ ನಿರ್ಧಾರ ತೆಗೆದುಕೊಂಡರು ಗೊತ್ತಾಗುತ್ತಿಲ್ಲ ಎಂದು ಚಂದು ಗೌಡ ಭಾವುಕರಾಗಿದ್ದಾರೆ.