ಗದಗ: ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ ವೃತ್ತದ ಬಳಿಯ ಲಾಡ್ಜ್ವೊಂದರಲ್ಲಿ ಮೃತ ಯುವಕನನ್ನು ಶಿರಹಟ್ಟಿ ಮೂಲದ 37 ವರ್ಷದ ಜಗದೀಶ್ ಹಳೆಮನಿ ಎಂದು ಗುರುತಿಸಲಾಗಿದ್ದು, ನೇಣಿಗೆ ಶರಣಾಗಿದ್ದಾನೆ.
SRH ತಂಡ ಸೇರಿದ ಬಳಿಕ ಮುಂಬೈ ತಂಡಕ್ಕೆ ಭಾವುಕ ಸಂದೇಶ ರವಾನಿಸಿದ ಇಶಾನ್ ಕಿಶನ್!
ಜಗದೀಶ್ ದೊಡ್ಡ ವ್ಯಾಪಾರಸ್ಥನಾಗಿದ್ದು, ಹಲವಾರು ತಿಂಗಳಿಂದ ಆನ್ಲೈನ್ ಗೇಮ್ನಲ್ಲಿ ಮಗ್ನನಾಗಿದ್ದ. ಆನ್ಲೈನ್ ಗೇಮ್ನಲ್ಲಿ ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ನಿನ್ನೆ ರಾತ್ರಿ 10:30ರ ಸುಮಾರಿಗೆ ಶಿರಹಟ್ಟಿಯಿಂದ ಗದಗನಲ್ಲಿರುವ ಲಾಡ್ಜ್ವೊಂದಕ್ಕೆ ಬಂದಿದ್ದ. ಬಳಿಕ ಕಂಠಪೂರ್ತಿ ಕುಡಿದು, ಸ್ವಲ್ಪ ಊಟ ಮಾಡಿದ್ದಾನೆ. ನಂತರ ನಶೆಯಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.