ಬೆಂಗಳೂರು: ಎಚ್ಎಸ್ಆರ್ಪಿ ನೋಂದಣಿಯ ಕೊನೆಯ ದಿನಾಂಕವನ್ನು ಈ ವರ್ಷ ಡಿಸೆಂಬರ್ 31 ರವರೆಗೆ ವಿಸ್ತರಿಸಲು ಕರ್ನಾಟಕ ರಾಜ್ಯ ನಿರ್ಧರಿಸಿದೆ.
ಸದ್ಯದ ಗಡುವು ನವೆಂಬರ್ 30 ರಂದು ಮುಕ್ತಾಯಗೊಳ್ಳುತ್ತದೆ. ಗಮನಾರ್ಹ ಸಂಖ್ಯೆಯ ವಾಹನಗಳು ಇನ್ನೂ ತಮ್ಮ ವಾಹನಗಳಿಗೆ ಎಚ್ಎಸ್ಆರ್ ಪ್ಲೇಟ್ಗಳನ್ನು ಅಳವಡಿಸಿಲ್ಲ ಎಂದು ಉಲ್ಲೇಖಿಸಿ ಸಾರಿಗೆ ಆಯುಕ್ತರ ಕಚೇರಿಯು ಸಾರಿಗೆ ಸಚಿವರು ಮತ್ತು ಕಾರ್ಯದರ್ಶಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 5 ನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ.
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ಸರ್ಕಾರ ನಾಲ್ಕು ಬಾರಿ ಬಾರಿ ಗಡುವು ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಡಿಸೆಂಬರ್ 31ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಿಸಿದೆ.
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 30 ಕೊನೆ ದಿನಾಂಕವಾಗಿತ್ತು. ಇದೀಗ ಸಾರಿಗೆ ಇಲಾಖೆ ಈ ವರ್ಷದ ಕೊನೆಯ ದಿನದ ವರೆಗೆ ಗಡುವು ನೀಡಿದೆ.
ಕರ್ನಾಟಕದಲ್ಲಿರುವ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳು, ಕೇವಲ 55 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಹೀಗಾಗಿ 01-04-2019 ರ ಹಿಂದಿನ ಎಲ್ಲಾ ವಾಹನಗಳು ಡಿಸೆಂಬರ್ 31ರೊಳಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಈ ಮೂಲಕ ಐದನೇ ಬಾರಿಗೆ ಗಡವು ವಿಸ್ತರಿಸಿದೆ.