ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ವಿಧಿವಶರಾಗಿದ್ದಾರೆ. ಸಾವಿನ ಸುದ್ದಿ ತಿಳಿದು ಶೋಭಿತಾ ಕುಟುಂಬ ಸದಸ್ಯರು ಶಾಕ್ ಆಗಿದ್ದಾರೆ.
ಮದುವೆಯ ನಂತರ ಹೈದರಾಬಾದ್ನಲ್ಲಿ ಶೋಬಿತಾ ಸೆಟಲ್ ಆಗಿದ್ದರು. ಆದರೆ ದಿಢೀರ್ ಸಾವಿನಿಂದ ಎಲ್ಲರೂ ಶಾಕ್ ಗೆ ಒಳಗಾಗಿದ್ದಾರೆ.
ಕಿರುತೆರೆ ನಟಿ ಶೋಭಿತಾ ಅವರು ಮದುವೆಯ ನಂತರ ಹೈದರಾಬಾದ್ನಲ್ಲಿ ವಾಸವಾಗಿದ್ದರು.
ಮಧ್ಯರಾತ್ರಿ ಶೋಭಿತಾ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಶಾಕಿಂಗ್ ಸುದ್ದಿ ತಿಳಿದ ಶೋಭಿತಾ ಕುಟುಂಬ ಸದಸ್ಯರು ಹೈದರಾಬಾದ್ಗೆ ತೆರಳುತ್ತಿದ್ದಾರೆ.
ಹಾಸನಮೂಲದ ಸಕಲೇಶಪುರದ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರೊ ಮಾಹಿತಿ ಇದೆ. ಸದ್ಯ ಫಸ್ಟ್ ಡೇ ಫಸ್ಟ್ ಶೋ ಸಿನಿಮಾದಲ್ಲಿ ನಟಿ ನಟಿಸಿದ್ದ.
ಎರಡುವರ್ಷಗಳ ಹಿಂದೆ ಹೈದರಾಬಾದ್ನಲ್ಲಿ ಮದುವೆಯಾಗಿ ಸೆಟ್ಲ್ ಆಗಿದ್ರು. ನಟಿ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ . ನಿನ್ನೆ ರಾತ್ರಿ ನಡೆದಿರೋ ಘಟನೆ ಅನ್ನೋ ಮಾಹಿತಿ ಇದೆ ನಿನ್ನೆಯಷ್ಟೆ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಶೇರ್ ಮಾಡಿದ್ರು. ಮದುವೆ ಆದಾಗಿಂದ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಂಡಿದ್ರು. ಇದೀಗ ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಮೃತದೇಹ ತರೋ ಸಾಧ್ಯತೆ ಇದೆ ಎನ್ನಲಾಗಿದೆ.