ಬೆಂಗಳೂರು: ಮಾಜಿ ಸಿಎಂ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ಯತ್ನಾಳ್ ಟೀಕೆ ಮಾಜಿ ಸಚಿವ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ವಿಜಯೇಂದ್ರ ಅವರನ್ನ ಬಯ್ಯೋದು, ಬಸವಣ್ಣನವರ ಬಗ್ಗೆಯು ಅಪಮಾನ ಮಾಡಿದರು. ಕೇಂದ್ರ ಸಚಿವರ ಬೆಂಬಲ ಇದೆ ಅಂತಾರೆ. ನಾವು ದೇವಸ್ಥಾನದಲ್ಲಿ ಚರ್ಚೆ ಮಾಡಿದ್ದೇವೆ. ಬುದ್ದಿ ಭ್ರಮಣೆಯಾದವರು ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತಾಡ್ತಾರೆ. ಹಾದಿ ಬೀದಿಯಲ್ಲಿ ಶುರುಮಾಡಿದ್ದು ಅವರು, ೫೦ ಮಾಜಿ ಶಾಸಕರು ಸೇರಿ ಪಕ್ಷ ಸಂಘಟನೆಗೆ ಪ್ರಾರಂಭ ಮಾಡಿದ್ದೇವೆ. ಯಡಿಯೂರಪ್ಪ ಮೋದಿ ನಾಯಕತ್ವ ಇದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ವಿಧಾನಸಭೆ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ ನಡೆಯಬೇಕು. ನಿನ್ನೆ ೪೦ ಜನಕ್ಕು ಹೆಚ್ಚು ಜನ ಸಭೆ ಸೇರಿದ್ವು. ಇವತ್ತು ಯಡಿಯೂರಪ್ಪ ಅವರನ್ನ ಮಾತಾಡಿಸಬೇಕು ಎಂದು ಬಂದಿದ್ವು. ಯಡಿಯೂರಪ್ಪ ಅವರು ನಮ್ಮನ್ನ ಕರೆದಿಲ್ಲಾ. ನಾವೆ ಬಂದಿದ್ವು ಉಪಹಾರ ಮಾಡಿ ಅವರ ಜೊತೆ ಚರ್ಚೆ ಮಾಡಿದ್ದೇವೆ ಎಂದರು.
ಇದೇ ವೇಳೆ ಯತ್ನಾಳ್ ಗೆ ಎಲ್ಲಿದೆ ಶಕ್ತಿ, ಅವರು ಇರೋದು ನಾಲ್ಕೇ ಜನ. ನಾಳೆ ಹತ್ತನೇ ತಾರೀಖು ನಾವೆಲ್ಲರೂ ದಾವಣಗೆರೆ ಯಲ್ಲಿ ಸೇರುತ್ತೇವೆ. ಡಿಸೆಂಬರ್ ೧೧ ರಂದು 60ಕ್ಕೂ ಹೆಚ್ಚು ಜನರು ದಾವಣಗೆರೆ ಯಲ್ಲಿ ಸೇರ್ತೇವೆ. ಅವರನ್ನು ಉಚ್ಚಾಟನೆ ಮಾಡಬೇಕಾ ಬೇಡ್ವಾ ಎಂದು ತೀರ್ಮಾನ ಮಾಡ್ತೀವಿ ಎಂದರು. ಇದೇ ವೇಳೆ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿ, ಪೇಪರ್ ಸಿಂಹ ನಮ್ಮ ಬಗ್ಗೆ ಮಾತಾಡಿದ್ದಾರೆ. ನಾವು ಯಾವುದೋ ಕಾರಣಗಳಿಗೆ ಸೋಲಿಸಿದ್ಸಾರೆ. ನಮ್ಮನ್ನು ಜನರು ಏನು ತಿಪ್ಪೆಗೆ ಎಸೆದಿಲ್ಲ. ಆದರೆ ನಿಮ್ಮ ತರ ಪೇಪರ್ ಸಿಂಹ ಅಲ್ಲ. ಮೈಸೂರಲ್ಲಿ ಎಷ್ಟು ಸಂಘಟನೆ ಮಾಡಿದ್ದೀರಿ..? ಮತ್ತೆ ಎಷ್ಟು ಜನರನ್ನು ಗೆಲ್ಲಿಸಿದ್ದೀರಿ..?. ಕೊಡಗು ಮತ್ತೆ ಮೈಸೂರಲ್ಲಿ ಅವರ ಸಾಮರ್ಥ್ಯದಿಂದ ನಮ್ಮವರು ಗೆದಿದ್ದಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ನಿನಗೆ ಸಾಮರ್ಥ್ಯ ಇದ್ದಿದ್ದರೆ ಯಾಕೆ ನಿಮ್ಮಿಬ್ಬರ ಗೆಲ್ಲಿಸಿಲ್ಲ. ಪೇಪರ್ ಸಿಂಹ ನೀನು, ನೀನು ಏನು ಪ್ರಯೋಜನ ಇಲ್ಲ ಅಂತಾ ಡಸ್ಟ್ಬಿನ್ ಮತ್ತೆ ಕೊಚ್ಚೆಗೆ ಎಸೆದಿದ್ದಾರೆ ನಿನ್ನನ್ನು ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್, ನಾವು ಸುಮಾರು 50 ಜನರು ನಿನ್ನೆ, ಮೊನ್ನೆ ಪ್ರವಾಸ ಮಾಡಿ, ಇವತ್ತು ಬಂದು ಯಡಿಯೂರಪ್ಪ ಭೇಟಿ ಮಾಡಿದ್ದೆವು. ಎರಡು ದಿನಗಳ ಕಾಲ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಕೆಲವರು ಮಾತಾಡ್ತಿದ್ರು. ಇವರ ವಿರುದ್ಧ ನೀವು ಪ್ರವಾಸ ಮಾಡಿದ್ದು ಸರಿ ಎಂದಿದ್ದರು. ಕಾರ್ಯಕರ್ತರು ಯತ್ನಾಳ್ ಗೆ ಉಚ್ಚಾಟನೆಗೆ ಕೇಳಿದರು. ಇವಾಗ್ಲೂ ಅವರಿಗೆ ಮನವಿ ಮಾಡುತ್ತೇವೆ ಪಕ್ಷದ ಅಧ್ಯಕ್ಷರ ಜೊತೆ ಬನ್ನಿ ಅಂತಾ. ಇಲ್ಲ ಅಂದಲ್ಲಿ ಅವರನ್ನು ಉಚ್ಚಾಟನೆ ಮಾಡಿ ಎಂದು ಕೇಳಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ವಿಜಯೇಂದ್ರರನ್ನು ಬರೋ ಚುನಾವಣೆವರೆಗೆ ಅಧ್ಯಕ್ಷರಾಗಿ ಮುಂದುವರಿಸಬೇಕು ಅಂತಾ ಯಡಿಯೂರಪ್ಪನ ಬಳಿ ಕೇಳಿದ್ದೇವೆ. ಅವರು ಪಕ್ಷ ಸಂಘಟನೆ ಮಾಡಿ ಎಂದು ನಮಗೆ ಹೇಳಿದ್ದಾರೆ. ನಾವು ಹೈಕಮಾಂಡ್ ನಾಯಕರ ಜೊತೆ ಮಾತಾಡ್ತೇವೆ. ನೀವು ಯಾರು ಧೃತಿಗೆಡಬೇಡಿ ಎಂದಿದ್ದಾರೆ. ವಿಜಯೇಂದ್ರ ಬದಲಾವಣೆ ಕುರಿತು ಯತ್ನಾಳ್ ಮಾತು ಬರಿ ಕಾಲ್ಪನಿಕ ಅಷ್ಟೇ ಎಂದರು.