ದೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ ಏರಿಕೆ ಕಂಡಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿದ್ದು,. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು,19 ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 16.50 ರೂ. ಏರಿಕೆಂಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ಸದ್ಯ 1,818.50 ರೂ. ಆಗಿದೆ. ಆದರೆ 14 ಕೆಜಿಯ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಮಾತ್ರ ಬದಲಾವಣೆಯಾಗಿಲ್ಲ. ಕಳೆದ ನವೆಂಬರ್ 1ರಂದು 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಆಗ ದೆಹಲಿಯಲ್ಲಿ ಸಿಲಿಂಡರ್ ಬೆಲೆ 1740 ರೂ.ನಿಂದ 1802 ರೂ.ಗೆ, ಕೋಲ್ಕತ್ತಾದಲ್ಲಿ 1850.50 ರೂ.ನಿಂದ 1911.50 ರೂ.ಗೆ ಮತ್ತು ಮುಂಬೈನಲ್ಲಿ 1692.50 ರೂ. ಬದಲಿಗೆ 1754 ರೂ. ಚೆನ್ನೈನಲ್ಲಿ 1903 ರೂ.ನಿಂದ 1964 ರೂ.ಗೆ ಹೆಚ್ಚಿಸಲಾಗಿತ್ತು.
ಫೆಂಗಲ್ ಸೈಕ್ಲೋನ್ ಎಫೆಕ್ಟ್ : ತಮಿಳುನಾಡು ಆಂಧ್ರದಲ್ಲಿ ಜನಜೀವನ ಅಸ್ತವ್ಯಸ್ತ