ಬೆಳಗಾವಿ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಗ್ಗೆ ಮತ್ತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ವಕ್ಪ್ ವಿರುದ್ಧ ಜನ ಜಾಗೃತಿಯನ್ನು ನಾವು ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ ಕಿತ್ತೂರು ಕರ್ನಾಟಕ ಪ್ರವೇಶ ಮಾಡಿದ್ದೇವೆ. ನಾಳೆ ನಾವೆಲ್ಲಾ ದೆಹಲಿಗೆ ಹೋಗುತ್ತಿದ್ದೇವೆ. ಇಲ್ಲಿಯವರೆಗೆ ಮಠ, ಮಂದಿರ ವಕ್ಪ್ ಆಗಿದೆ ಅದರ ಬಗ್ಗೆ ವರದಿ ಕೊಡ್ತೇವೆ. ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡ್ತಿವಿ. ಅಷ್ಟಕ್ಕೆ ಮಾತ್ರ ನಮ್ಮ ಪ್ರವಾಸವಿದೆ ಎಂದರು.
ಇದೇ ವೇಳೆ ಯತ್ನಾಳ್ ಉಚ್ಛಾಟನೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಅಯಪ್ಪಾ, ಬಹಳ ದೊಡ್ಡ ಅನಾಹುತ. ಯಡಿಯೂರಪ್ಪ ಮನೆ ಬಿಟ್ಟು ಹೋಗೊದು ಹೇಗೆ. ಯಡಿಯೂರಪ್ಪ ಮನೆಯಲ್ಲಿ ಮಲಗೋದು ಹೇಗೆ, ನನ್ನ ಎದೆ ಹೋಡಿತು ಈಗ. ಬಹಳ ನೋವಿನ ಸಂಗತಿ ಇದು, ಕಣ್ಣಿರು ಬರ್ತಾ ಇದ್ದಾವೆ ಎಂದು ಯತ್ನಾಳ್ ವ್ಯಂಗ್ವವಾಡಿದರು. ಕಳೆದ ಹದಿನೈದು ವರ್ಷಗಳಿಂದ ಯತ್ನಾಳ್ ಉಚ್ಚಾಟನೆ, ನೋಟಿಸ್ ಎಂದು ಬರುತ್ತಲೇ ಇದೆ. ಆದರೆ ಯಾಕೆ ಉಚ್ಚಾಟನೆ ಆಗಿಲ್ಲ ಎಂದು ವಿಶೇಷ ಕಾರ್ಯಕ್ರಮ ಮಾಡಿ. ನಾಳೆ ಎಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ಬೇರೆ ಬೇರೆ ವಿಮಾನದಲ್ಲಿ ದೆಹಲಿಗೆ ಹೋಗುತ್ತಿದ್ದೇವೆ. ತಂಡದಲ್ಲಿ ಒಡಕು ಎಂದು ಬಿಂಬಿಸಬೇಡಿ ಎಂದರು.
ತುಮಕೂರಿನಲ್ಲಿ ಸಿಎಂ ಕಾರ್ಯಕ್ರಮದ ವೇಳೆ ಧಿಕ್ಕಾರ ಕೂಗಿದವರಿಗೆ ಬಹುಮಾನ..?
ಯತ್ನಾಳ್ ವಿರುದ್ಧ ದೂರು ಕೊಟ್ಟಿಲ್ಲ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ನಾವು ಯಡಿಯೂರಪ್ಪ ಕುಟುಂಬದ ಯಾವುದೇ ಮಾತಾಡಿಲ್ಲ. ಯಾವುದೇ ಗೊಂದಲ ಇಲ್ಲ. ನಾವು ವಕ್ಫ್ ಬಗ್ಗೆ ಮಾತನಾಡೋದು ತಪ್ಪಾ..? ವಕ್ಪ್ ಇಡೀ ದೇಶದ ಕ್ಯಾನ್ಸರ್ ಇದೆ. ದೀಪ ಆರಿಸುವವರ ಬಗ್ಗೆ ನಾನು ಯಾಕೆ ಮಾತನಾಡಲಿ ಎಂದು ಯಡಿಯೂರಪ್ಪ ಆಪ್ತರಿಗೆ ಟಾಂಗ್ ಕೊಟ್ಟರು. ರೇಣುಕಾಚಾರ್ಯ ನಾವೆಲ್ಲ ಜವಾರಿ ಎಂಬ ಹೇಳಿಕೆಗೆ ದೇಶದಲ್ಲಿ ಹುಟ್ಟಿದವರು ಎಲ್ಲರೂ ಜವಾರಿನೇ, ಹೊರಗಿನಿಂದ ಬಂದವರು ಮಾತ್ರ ಹೈಬ್ರಿಡ್ ಎಂದು ತಿರುಗೇಟು ನೀಡಿದರು.