ಬೆಳಗಾವಿ: ಬಸನಗೌಡ ಪಾಟೀಲ ಯತ್ನಾಳ ಅವರಿಗೆ ದೊಡ್ಡ ಅಭಿಮಾನ ಬಳಗವಿದೆ ಎಂದು ಸಂಸದ ಪ್ರತಾಪ್ ಸಿಂಹ ಯತ್ನಾಳರನ್ನು ಉಚ್ಛಾಟನೆ ಮಾಡಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಜನರಿಂದ ತಿರಸ್ಕಾರಗೊಂಡು ಮೂಲೆಗುಂಪಾಗಿರುವ ವ್ಯಕ್ತಿಗಳ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ನಾಯಕರ ಸಮ್ಮುಖದಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ಒಟ್ಟಾರೆ ಹೋರಾಟ ವಕ್ಫ್ ಬೋರ್ಡ್ ವಿರುದ್ಧ, ಸಿದ್ದರಾಮಯ್ಯನವರ ಹಿಂದೂ ವಿರೋಧಿ ಧೋರಣೆ ವಿರದ್ಧ. ವೈಯಕ್ತಿಕ ಮೇಲಾಟ, ಈ ರೀತಿಯ ಅಪಸ್ವರದ ಮಾತುಗಳಿಗೆ ಎಲ್ಲಿ ಜಾಗವಿದೆ ಈ ರೀತಿ ಏಕೆ ಬರುತ್ತಿವೆ ನಂಗೆ ಅರ್ಥ ಆಗ್ತಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದಾರೆ. ಯತ್ನಾಳ ಉಚ್ಛಾಟನೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಯತ್ನಾಳ ರಾಜ್ಯ ಬಿಜೆಪಿ ಅತಿದೊಡ್ಡ ನೇತಾರರು, 1994 ರಲ್ಲಿ ಯತ್ನಾಳ ಚುನಾಯಿತ ಪ್ರತಿನಿಧಿಯಾದವರು. ವಾಜಪೇಯಿ ಸರ್ಕಾರದಲ್ಲಿ ಯತ್ನಾಳ ಕೇಂದ್ರ ಸಚಿವರಾಗಿದ್ದರು. ಈ ಭಾಗದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಯತ್ನಾಳ ಹೊಂದಿದ್ದಾರೆ. ನಮ್ಮ ಹೋರಾಟ ವಿಜಯೇಂದ್ರ ವಿರುದ್ಧ ಅಲ್ಲ, ವಕ್ಫ್ ಬೋರ್ಡ್ ಭೂಕಬಳಿಕೆ ವಿರುದ್ಧ. ನಾವು ಒಳ್ಳೆಯ ಕೆಲಸ ಮಾಡ್ತಿದ್ದೇವೆ, ಹೈಕಮಾಂಡ್ ಗಮನಕ್ಕಿದೆ. ಬಿಜೆಪಿ ಸಂಘಟಿತ ಹೋರಾಟ ಮಾಡ್ತಿದ್ದಾರೆ, ಯತ್ನಾಳ ಪಾಪಲಾರಿಟಿಯ ಲಾಭ ಬಿಜೆಪಿಗೆ ಆಗುತ್ತದೆ ಎಂದರು.
ಅವರಿಗೆ ಯಡಿಯೂರಪ್ಪ,ವಿಜಯೇಂದ್ರರ ಬೈಯ್ಯೋದೆ ಪದವಿ ; ಯತ್ನಾಳ್ ಗೆ ಬಿವೈ ವಿಜಯೇಂದ್ರ ತಿರುಗೇಟು
ನಮ್ಮ ಹೋರಾಟ ವಕ್ಫ್ ಬೋರ್ಡ್ ಭೂಕಬಳಿಕೆಯ ನೀತಿ ವಿರುದ್ಧ ನಮ್ಮ ರಾಜ್ಯಾಧ್ಯಕ್ಷರದಾ ವಿಜಯೇಂದ್ರ ನ.21ಕ್ಕೆ ಸುದ್ದಿಗೋಷ್ಠಿ ಕರೆ ಕೊಟ್ಟಿದ್ರು. ನ.22ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ಕೊಟ್ಟಿದ್ರು. ನಾನೂ ಕೂಡ ವಿಜಯೇಂದ್ರ ನೀಡಿದ ಕರೆಗೆ ಸುದ್ದಿಗೋಷ್ಠಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಎಲ್ಲ ಕಡೆಯೂ ಕಾರ್ಯಕ್ರಮ ಯಶಸ್ವಿಯಾಗಿದೆ. ವಿಜಯಪುರದಲ್ಲಿ ಯತ್ನಾಳ ಅಹೋರಾತ್ರಿ ಧರಣಿ ನಡೆಸಿದ್ರು, ಜೆಪಿಸಿ ಚೇರ್ಮನ್ರು ಭೇಟಿ ನೀಡಿದ್ರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಹೋರಾಟದಲ್ಲಿ ಭಾಗಿಯಾಗಿದ್ರು. ನಮ್ಮ ಹೋರಾಟ ಬಿಜೆಪಿ ಹೋರಾಟ, ಯಾವುದೇ ವ್ಯಕ್ತಿ ವಿರುದ್ಧದ ಹೋರಾಟ ಅಲ್ಲ. ವಿಜಯೇಂದ್ರ, ಯತ್ನಾಳ, ರಮೇಶ್ ಜಾರಕಿಹೊಳಿ, ನಮ್ಮ ಕಾರ್ಯಕರ್ತರ ಗುರಿ ಒಂದೇ ವಕ್ಫ್ ಭೂಕಬಳಿಕೆಗೆ ತಡೆ ಹಾಕಿ ನಮ್ಮ ರೈತರ ಭೂಮಿ ರಕ್ಷಿಸುವುದಾಗಿದೆ. ಇಲ್ಲಿ ಅಪಸ್ವರ, ಭಿನ್ನಾಭಿಪ್ರಾಯಕ್ಕೆ ಅವಕಾಶ ಇಲ್ಲ ಎಂದು ಪ್ರತಾಪ್ ಸಮರ್ಥಿಸಿಕೊಂಡರು.