ಬೆಂಗಳೂರು: ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಓಟಿಎಸ್ ಗಡವು ಅಂತ್ಯ ಆಗಿದ್ದು, ಬಿಬಿಎಂಪಿಯಿಂದ ಹರಾಜಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
IPL 2025: ಡೆಲ್ಲಿ ತಂಡ ಮುನ್ನಡೆಸುವವರು ಯಾರು! ಫಾಫ್, ರಾಹುಲ್, ಅಕ್ಷರ್!?
ಆಸ್ತಿ ತೆರೆಗೆ ಬಾಕಿ ಉಳಿಸಿಕೊಂಡಿದ್ದ ತೆರಿಗೆದಾರರಿಗೆ ನೀಡಿದ್ದ ಡೆಡ್ಲೈನ್ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತೆರಿಗೆ ಕಟ್ಟದವರಿಗೆ ಬಿಸಿ ಮುಟ್ಟಿಸಲು ಪಾಲಿಕೆ ಸಜ್ಜಾಗಿದೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟ್ಲಮೆಂಟ್ ಅವಕಾಶ ಶನಿವಾರ ಕ್ಕೆ ಕೊನೆಗೊಂಡಿದೆ.
ಈಗಾಗಲೇ ಸಾಕಷ್ಟು ಅವಕಾಶ ಕೊಟ್ಟರೂ ಕೂಡ ಬಾಕಿ ತೆರಿಗೆ ಕಟ್ಟದವರಿಗೆ ಇಂದಿನಿಂದ ಬಡ್ಡಿ, ಹರಾಜು ಅಸ್ತ್ರ ಪ್ರಯೋಗಿಸಲುಕೆ ಪಾಲಿಕೆ ಸಜ್ಜಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಒನ್ ಟೈಮ್ ಸೆಟ್ಲಮೆಂಟ್ ಯೋಜನೆಯಡಿ ಬಾಕಿ ಆಸ್ತಿ ತೆರಿಗೆ ಪಾವತಿಗೆ ಈ ತಿಂಗಳ ಕೊನೆವರೆಗೆ ಟೈಮ್ ನೀಡಿತ್ತು. ಬಾಕಿ ತೆರಿಗೆ ವಸೂಲಿಗೆ ಸರ್ಕಾರ ನೀಡಿದ್ದ ಗಡುವು ಇವತ್ತಿಗೆ ಅಂತ್ಯವಾಗಿದೆ. ಈವರೆಗೆ ಬೆಂಗಳೂರು ನಗರದಲ್ಲಿ ಓಟಿಎಸ್ ಮೂಲಕ ಶೇ 60 ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಇತ್ತ ಅವಕಾಶ ಕೊಟ್ಟರೂ ತೆರಿಗೆ ಕಟ್ಟದ ಶೇ 40 ರಷ್ಟು ತೆರಿಗೆದಾರರಿಗೆ ಬಿಸಿ ಮುಟ್ಟಿಸಲು ಪಾಲಿಕೆ ತಯಾರಿ ನಡೆಸಿದೆ.