ಭಾರತದ ಖ್ಯಾತ ಉದ್ಯಮಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ವಿರುದ್ಧ ವಂಚನೆ ಆರೋಪಕೇಳಿ ಬಂದಿದೆ. ಅಮೆರಿಕ ಮಾಡಿರುವ 265 ಮಿಲಿಯನ್ ಡಾಲರ್ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಗೌತಮ್ ಅದಾನಿ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಚಾಲೆಂಜ್ಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನು ಅಲ್ಲ. ಇಂತಹವುಗಳು ನಮ್ಮನ್ನು ಇನ್ನಷ್ಟು ಪ್ರಬಲಗೊಳಿಸುತ್ತಾವೆ ಎಂದಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆದ 51ನೇ ರತ್ನ ಮತ್ತು ಆಭರಣ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಗೌತಮ್ ಅದಾನಿ, ಅಮೆರಿಕವು ಗ್ರೀನ್ ಎನರ್ಜಿ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಮಾಡಿತು. ಇಂತಹ ಆರೋಪಗಳನ್ನ ಎದುರಿಸುತ್ತಿರುವುದು ಇದೇ ಮೊದಲಲ್ಲ. ಇಂತಹ ದಾಳಿಗಳು ನಮಗೆ ಇನ್ನಷ್ಟು ಶಕ್ತಿ ಕೊಡುತ್ತವೆ. ಇವುಗಳನ್ನು ಮೆಟ್ಟಿಲುಗಳು ಎಂದು ತಿಳಿದು ಉದ್ಯಮದಲ್ಲಿ ನಾವು ಮುಂದೆ ಸಾಗುತ್ತಿರುತ್ತೇವೆ ಎಂದು ಹೇಳಿದ್ದಾರೆ.
ಅದಾನಿ ಗ್ರೂಪ್ನ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ವಿನೀತ್ ವಿರುದ್ಧ ಅಮೆರಿಕ ಆರೋಪಗಳನ್ನು ಮಾಡಿತ್ತು. ಈ ಬಗ್ಗೆ ಮಾತನಾಡಿ, ನಮ್ಮನ್ನು ಕುಗ್ಗಿಸಲು ಆಗುವುದಿಲ್ಲ. ಇದರಿಂದ ನಾವು ಇನ್ನಷ್ಟು ಕೆಲಸ ಮಾಡಲು ಮುಂದಾಗುತ್ತೇವೆ. ಪ್ರತಿ ಹಂತದಲ್ಲಿಯು ಜಾಗೂರಕರಾಗಿ ಮುಂದೆ ಸಾಗುತ್ತೇವೆ. ಹಿಂದೆ ಬೀಳದೆ, ಯಶಸ್ವಿ ಕಡೆಗೆ ಮಾತ್ರ ನೋಡುತ್ತೇವೆ ಎಂದು ಹೇಳಿದ್ದಾರೆ.
2020 ರಿಂದ 2024ರ ಒಳಗೆ ಅದಾನಿ ಗ್ರೂಪ್ನಿಂದ ಭಾರತದ ಸರ್ಕಾರಿ ಅಧಿಕಾರಿಗಳಿಗೆ 2 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿಗಳನ್ನು ಲಂಚ ನೀಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಅದಾನಿ ಗ್ರೂಪ್ನ ಕೆಲವರ ಮೇಲೆ ದೋಷಾರೋಪ ಮಾಡಲಾಗಿದೆ. ಈ ಆರೋಪಗಳನ್ನೆಲ್ಲ ಅದಾನಿ ಗ್ರೂಪ್ ನಿರಾಕರಣೆ ಮಾಡುತ್ತಲೆ ಬಂದಿದೆ.