ರಾಮನಗರ: ಚನ್ನಪಟ್ಟಣ ವಿಧಾಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರ ಕೃತಜ್ಞತಾ ಸಭೆ ನಡೆಯಿತು, ಚನ್ನಪಟ್ಟಣದ ಖಾಸಗಿ ಹೋಟೆಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಭೆ ನಡೆದಿದ್ದು, ಕೇಂದ್ರ ಸಚಿವ HDK ಹೆಚ್ಡಿಕೆ ಜೊತೆ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೂಡ ಭಾಗಿ NDA ಮೈತ್ರಿಕೂಟದ ಮುಖಂಡರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚುನಾವಣೆ ಫಲಿತಾಂಶ ಬಂದು ಒಂದು ವಾರ ಕಳೆದಿದೆ. ಫಲಿತಾಂಶವನ್ನು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ನಿಷ್ಠಾವಂತ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದಿದ್ದೀರಾ.. ಹೀಗಾಗಿ ಇವರಿಗೆ ಕೃತಜ್ಞತೆ ತಿಳಿಸಬೇಕು ಅಂತಾ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ಉಪ ಚುನಾವಣೆ ಫಲಿತಾಂಶ ಸಾಮೂಹಿಕವಾಗಿ ತೆಗೆದುಕೊಳ್ಳಬೇಕು ಎಂದರು.
ಜನಾತಾ ದಳದ ಕಾರ್ಯಕರ್ತರು ಇಡೀ ಸರ್ಕಾರವನ್ನು ಎದುರಿಸಿದ್ದೀರಾ.. ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಪಕ್ಷವನ್ನು ಕಳೆದ ಇಪ್ಪತ್ತು ವರ್ಷಗಳಿಂದ ಕಟ್ಟಿದ್ದಾರೆ. ಹೋರಾಟದ ರೂಪದಲ್ಲಿ ಪಕ್ಷವನ್ನು ಕಟ್ಟಿದವರು ದೇವೇಗೌಡರು. ನಾನು ಕಳೆದ ಮೂರು ಚುನಾವಣೆಯಲ್ಲಿ ಸೋತಿದ್ದೇನೆ. ಧೃತಿಗೆಟ್ಟಿಲ್ಲ, ಯಾರೂ ಕಣ್ಣೀರು ಹಾಕಬೇಡಿ. ನಾವು ಸತ್ತಿಲ್ಲ, ಸೋತಿದ್ದೇವೆ. ಕುಮಾರಸ್ವಾಮಿ ದೇವೇಗೌಡರು ಎಷ್ಟು ಸೋಲನ್ನು ಕಂಡಿಲ್ಲ, ನಾವು ಒಂದು ಉಪ ಚುನಾವಣೆಗೆ ಧೃತಿಗೆಟ್ಟರೆ ಹೇಗೆ..> ಜಿಲ್ಲೆಯಲ್ಲಿ ಎಂಟು ಬಾರಿ ಕುಮಾರಸ್ವಾಮಿ ಅವರು ಗೆದ್ದಿದ್ದಾರೆ. ನಮ್ಮ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಕಟ್ಟಬೇಕು ಅನ್ನೋದು ಕುಮಾರಸ್ವಾಮಿ ಅವರ ಚಿಂತನೆ. ನನ್ನ ಬಗ್ಗೆ ಅನುಮಾನ ಪಡಬೇಡಿ. ನಾನು ಈ ಪಕ್ಷವನ್ನು ದೇವೇಗೌಡರು ಮಾರ್ಗದರ್ಶನದಲ್ಲಿ ಒಂದು ದಡವನ್ನು ಮುಟ್ಟಿಸಬೇಕು ಎಂದುಕೊಂಡಿದ್ದೇನೆ. ಕಾಲ ಚಕ್ರ ತಿರುಗುತ್ತಲ್ಲೇ ಇರುತ್ತದೆ. ಮೂರುವರೆ ವರ್ಷಗಳ ಕಾಲ ಪಕ್ಷವನ್ನು ಸಂಘಟನೇ ಮಾಡೋಣ . ರಾಮನಗರ ಜಿಲ್ಲೆ ಕಳೆದ ಮೂವತ್ತು ವರ್ಷಗಳಿಂದ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಾಲ್ಕು ಸ್ಥಾನವನ್ನು ಗೆಲ್ಲೋಣ, ಸಹಕಾರ ಮಾಡಿ, ಪಕ್ಷ ಸಂಘಟನೆ ಮಾಡೋಣ. ಯಾರೂ ಕೂಡ ಬೇಸರ ಮಾಡಿಕೊಳ್ಳ ಬೇಡಿ ಎಂದರು.