ಮಂಡ್ಯ: ವಿದ್ಯುತ್ ಬಿಲ್ ಕಟ್ಟಿ ಎಂದಿದಕ್ಕೆ ಕೆಇಬಿ ಸಿಬ್ಬಂದಿ ಮೇಲೆ ದಂಪತಿ ದರ್ಪ ತೋರಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜು ಹಾಗೂ ಆತನ ಪತ್ನಿಯಿಂದ ಕೆಇಬಿ ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ. ಬಾಕಿ ಬಿಲ್ ಕೇಳಿದ್ದಕ್ಕೆ ಶಿವಕುಮಾರ್ ಎಂಬ ಕೆಇನಿ ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನ ನಡೆಸಿದ್ದಾರೆ. ಗೃಹ ಜ್ಯೋತಿ ಯೋಜನೆ ಜಾರಿಗೂ ಮೊದಲಿನಿಂದಲೂ ವಿದ್ಯುತ್ ಬಿಲ್ ಪೆಡಿಂಗ್ ಇದ್ದು, 9 ಸಾವಿರ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೇ ಗೃಹ ಜ್ಯೋತಿ ಯೋಜನೆಗೂ ಅರ್ಜಿ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆ.
ಕಾಂಗ್ರೆಸ್ ಪಕ್ಷದ ಚಿಹ್ನೆಯಡಿಯಲ್ಲೇ ಹಾಸನ ಸಮಾವೇಶ – ಹೆಚ್ .ಎಂ. ರೇವಣ್ಣ
ಬಿಲ್ ಕಟ್ಟದಿದ್ದನ್ನು ಕೇಳಿದ ಸಿಬ್ಬಂದಿ ಮೇಲೆಯೇ ದರ್ಪ ತೋರಿಸಿದ್ದು, ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಲ್ ಕೊಡುವಾಗ ಹಳೇ ಬಿಲ್ ಕ್ಲಿಯರ್ ಮಾಡಿ, ಬಿಲ್ ಕಟ್ಟದಿದ್ರೆ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಹಿಳೆ ಅವಾಜ್ ಹಾಕಿ ಗಲಾಟೆ ಪ್ರಾರಂಭಿಸಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಮಹಿಳೆಯ ಪತಿ ಮಂಜು ಕೂಡ ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾನೆ. ಈ ಬಗ್ಗೆ ವಿಡಿಯೋ ಸಹಿತ ಕೆ.ಆರ್ ಎಸ್. ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಳಿಕ ಪೊಲೀಸರು ದರ್ಪ ತೋರಿದ ದಂಪತಿಯಿಂದ ಮುಚ್ಚಳಿಕೆ ಬರೆಸಿಕೊಂಡು ರಾಜೀ ಸಂಧಾನ ಮಾಡಿದ್ದಾರೆ.