ಕೊಪ್ಪಳ: ಕಾಂಗ್ರೆಸ್ ಪಕ್ಷದ ಚಿಹ್ನೆಯಡಿಯಲ್ಲೇ ಹಾಸನ ಸಮಾವೇಶ ನಡೆಯಲಿದೆ ಎಂದು ಹೆಚ್ ಎಂ ರೇವಣ್ಣ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಡಬ್ಲ್ಯೂಸಿ ಮೀಟಿಂಗ್ ನಲ್ಲಿ ಚರ್ಚೆ ಆಗಿದೆ ಸಚಿವ ಸಂಪುಟ, ಕೆಪಿಸಿಸಿ ಅದ್ಯಕ್ಷರ ಬದಲಾವಣೆ ಯಾವುದು ಇಲ್ಲ ಎಂದರು. ,ಪಂಚ ಗ್ಯಾರಂಟಿ ಜಾರಿಗೆ ಬಂದ ಮೇಲೆ ಜನರಿಗೆ ನೇರವಾಗಿ ತಲುಪುವ ಕೆಲಸ ಮಾಡಿದ್ದೀವಿ. ಇಂತ ಕೆಲಸ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ, ಇಂದಿರಾ ಗಾಂಧಿ , ದೇವರಾಜ ಅರಸು ಕಾಲದಿಂದಲೂ ಇಂತಹ ಕೆಲಸ ಮಾಡಿದ್ದೇವೆ. ಉಳುವವನಿಗೆ ಭೂಮಿ ನೀಡಿದ ಕೀರ್ತಿ ಕಾಂಗ್ರೆಸ್ ಗೆ ಸೇರಿದೆ. ಅನ್ನಭಾಗ್ಯ, ವಸತಿ ಯೋಜನೆಗಳಂತಹ ಜನಪರ ಕಾರ್ಯಕ್ರಮಗಳನ್ನ ನೀಡಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದಂತೆ 168 ಬರವಸೆಗಳನ್ನ 150 ಬೇಡಿಕೆ ಈಡೇರಿಸಿದ್ದೇವೆ. ನಾವು ಕೊಟ್ಟಿದ್ದನ್ನ ಕಿತ್ಕೊಳೊದ್ರಲ್ಲಿ ಬಿಜೆಪಿಯವರು ಮುಂದೆ ಇದ್ದಾರೆ. 7 ಕೆಜಿಯಲ್ಲಿ 5 ಕೇಜಿ ಕೊಟ್ಟಿದ್ದರು ಎಂದರು.
ಯತ್ನಾಳ್ ಬಳಿಕ “ಭಿನ್ನ”ಮತದ ಹಾದಿಯಲ್ಲಿದ್ದಾರಾ ರಮೇಶ್ ಜಾರಕಿಹೊಳಿ..?
ಚುನಾವಣೆಯ ಮೊದಲು ಬೆಲೆ ಏರಿಕೆ ಹೆಚ್ಚಾಗಿತ್ತು. ಇದರ ಬಗ್ಗೆ ಸಮಗ್ರವಾಗಿ ಚಿಂತನೆ ನಡೆಸಿ, ನಮ್ಮ ನಾಯಕ ಜೊತೆ ಚರ್ಚೆ ಮಾಡಿ ಗ್ಯಾರಂಟಿ ಕಾರ್ಡಗಳನ್ನ ಹಂಚಿದ್ದರಿಂದ 136 ಸೀಟ್ ಗೆದ್ದು ಸರ್ಕಾರ ರಚನೆ ಮಾಡಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ಎಲ್ಲಾ ಗ್ಯಾರಂಟಿಗಳನ್ನ ಜಾರಿ ಮಾಡಿದ್ದೆವೆ. ಇವತ್ತ 366.55 ಕೋಟಿ ಮಹಿಳೆಯರು ಶಕ್ತಿ ಯೋಜನೆ ಪ್ರವಾಸ ಮಾಡಿದ್ದಾರೆ. ಗ್ರಹಲಕ್ಷ್ಮಿ ಯೋಜನೆ 1.22 ಕೋಟಿ ಜನರಿಗೆ ಸೇರಿದೆ. ಗ್ರಹ ಜ್ಯೋತಿ ಯೋಜನೆ 1.61 ಕೋಟಿ ಜನರಿಗೆ 11.031 ಕೋಟಿ ರಾಜ್ಯದಲ್ಲಿ ಖರ್ಚಾಗಿದೆ. ಯಾವುದೆ ಮದ್ಯವರ್ತಿಗಳಿಲ್ಲದೆ ಜನರಿಗೆ ತಲುಪಿದೆ. ಮೋದಿಯವರು 3 ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿದ್ರು ಅವರು ಉದ್ಯೋಗ ಕೊಟ್ಟಿಲ್ಲ ಹೀಗಾಗಿ ಯುವ ನಿಧಿಯನ್ನ ಕೊಡುತ್ತಾ ಇದ್ದೀವಿ. ಈ ಯೋಜನೆಯನ್ನ ಸಾಮಾನ್ಯ ಜನರು ಯಾರು ವಿರೋದ ಮಾಡ್ತಾಯಿಲ್ಲ. ಕೇವಲ ಬಿಜೆಪಿ ಜೆಡಿಎಸ್ ನವರು ವಿರೋದ ಮಾಡ್ತಾಯಿದ್ದಾರೆ ಎಂದರು. ಇನ್ನೂ ಹಾಸನದಲ್ಲಿ ಸಿದ್ದರಾಮಯ್ಯ ಶಕ್ತಿ ಸಮಾವೇಶ ವಿಚಾರವಾಗಿ ಮಾತನಾಡಿ, ಅನಾಮಧೇಯ ಪತ್ರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲೆ ಸಮಾವೇಶ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಚಿನ್ಹೆಯ ಅಡಿಯಲ್ಲೆ ಸಮಾವೇಶ ನಡೆಯುತ್ತ ಎಂದರು.