ಬೆಳಗಾವಿ: ಕೆಪಿಸಿಸಿಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ದೆಹಲಿಗೆ ಹೋಗಿ ಬಂದ್ಮೇಲೆ ಏನಾದರೂ ಈ ಬಗ್ಗೆ ಸುಳಿವು ಸಿಗಬಹುದು. ನಾನು ಅಧಿವೇಶನ ನಂತರ ದೆಹಲಿ ಹೋಗಿ ಬರುತ್ತೇನೆ ಎಂದರು. ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ರಾಜಾಧ್ಯಕ್ಷರು ಬೇಕೇ ಬೇಕು, ಇದರ ಬಗ್ಗೆ ಸಂಪೂರ್ಣ ಚರ್ಚೆಯೂ ಆಗಬೇಕು. ಹೆಚ್ಚು ಪಕ್ಷದ ಬಗ್ಗೆ ಗಮನ ಹರಿಸಬೇಕು ಎಂದರು.
ಹಳೇಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ : ತಂದೆ ಕೊಲೆ ಮಾಡಿದ ಮಗ-ಸೊಸೆಯ ಬಂಧನ
ಅಧ್ಯಕ್ಷರ ಬದಲಾವಣೆಯ ಬಗ್ಗೆ ಪಾರ್ಟಿ, ಸಿಎಂ, ಈಗಿರುವ ಅಧ್ಯಕ್ಷರು ಚರ್ಚೆ ಮಾಡಬೇಕು. ನಂತರ ಹೈಕಮಾಂಡ್ ತೀರ್ಮಾನ ಮಾಡಬೇಕು ಅಂತಿಮವಾಗಿ ಹೈಕಮಾಂಡ್ ಗಮನಹರಿಸಬೇಕು. ಅಧ್ಯಕ್ಷರ ಜತೆಗೆ ಏನೇನು ಮಾತುಕತೆ, ಚರ್ಚೆ ಆಗಿದೆ ಅನೋದು ಗೊತ್ತಿಲ್ಲ. ಅಧ್ಯಕ್ಷ ಹುದ್ದೆ ಸಣ್ಣ ಹುದ್ದೆಯಲ್ಲ, ಹೀಗಾಗಿ ಹೈಕಮಾಂಡ್ ಸೂಚನೆ ಬಂದ್ಮೇಲೆ ಚರ್ಚೆ ಮಾಡಬೇಕಾಗುತ್ತೆ. ಸೂಚನೆ ಬರದೇ ಹೀಗೆ ಆಗುತ್ತೆ ಅಂತಾ ಯಾರು ಮಾಡೋಕೆ ಆಗಲ್ಲ, ಅಧ್ಯಕ್ಷರಾಗಲೂ ಮೂರು-ನಾಲ್ಕು ಜನರು ರೇಸ್ ನಲ್ಲಿ ಇರ್ತಾರೆ. ಯಾರು ಪಕ್ಷಕ್ಕೆ ವೋಟ ತರುತ್ತಾರೆ, ಯಾರು ವೋಟ ಸೆಳೆಯುವ ಶಕ್ತಿ ಇರುತ್ತೆ ಅಂತವರಿಗೆ ಪಕ್ಷ ಅವಕಾಶ ಕೊಡಬೇಕು ಎಂದರು.