ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಗರಿಗೆದರಿದೆ ಸಿಎಂ,ಡಿಸಿಎಂ ಇಬ್ಬರೂ ದೆಹಲಿಗೆ ತೆರಳಿದ್ದಾರೆ. ಇಂದು ವರ್ಕಿಂಗ್ ಕಮಿಟಿ ಸಭೆಯ ನಂತರ ವರಿಷ್ಠರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ಸಂಪುಟ ಪುನಾರಚನೆ ಚರ್ಚೆ ಮಾಡಲಿದ್ದು,ಹೈಕಮಾಂಡ್ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಕೆಲವರು ಸಂಪುಟ ಸೇರೋಕೆ ಕಸರತ್ತು ನಡೆಸಿದ್ದು,ದೆಹಲಿಗೆ ತೆರಳಿದ್ದಾರೆ..ಇತ್ತ ಹಿರಿಯ ಸಚವರಿಗೆ ಸಂಪುಟದಿಂದ ಹೊರಬೀಳುವ ಆತಂಕ ಶುರುವಾಗಿದೆ.
ಯೆಸ್ ,ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ನಿರ್ಧರಿಸಿದಂತೆ ಕಾಣ್ತಿದೆ.ಇಷ್ಟು ದಿನ ಚುನಾವಣೆಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಹೈಕಮಾಂಡ್ ನಾಯಕರು ಕರ್ನಾಟಕದ ಕಡೆ ಫೋಕಸ್ ಮಾಡರ್ಲಿಲ್ಲ.ಈಗ ಎಲೆಕ್ಷನ್ ಮುಗಿದಿದ್ದು ಫಲಿತಾಂಶವೂ ಹೊರಬಿದ್ದಿದೆ. ಈಗ ರಿಲ್ಯಾಕ್ಸ್ ಮೂಡ್ ನಲ್ಲಿರುವ ಎಐಸಿಸಿ ನಾಯಕರು ಕರ್ನಾಟಕ ಸರ್ಕಾರದ ಕಡೆ ಗಮನಹರಿಸಿದ್ದಾರೆ. ಪಕ್ಷ ಹಾಗು ಸರ್ಕಾರದಲ್ಲಿ ನಿಷ್ಕೀಯವಾಗಿ ಇರೋರನ್ನ ಕೈಬಿಟ್ಟು ಹೊಸಬರಿಗೆ ಮಣೆಹಾಕೋಕೆ ಮುಂದಾಗಿದ್ದಾರೆ.ದೆಹಲಿಗೆ ತೆರಳಿರುವ ಸಿಎಂ ಹಾಗೂ ಡಿಸಿಎಂ ಇಬ್ರೂ ವರಿಷ್ಠರನ್ನ ಭೇಟಿ ಮಾಡಲಿದ್ದು ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳಿವೆ.
ಈ ಹಳೆ ನಾಣ್ಯಗಳು, ನೋಟುಗಳು ನಿಮ್ಮ ಹತ್ರ ಇದ್ಯಾ.? ಹಾಗಿದ್ದರೆ ಒಂದೇ ರಾತ್ರೀಲಿ ಲಕ್ಷಾಧಿಪತಿ ಆಗ್ತಿರಾ!
ಇನ್ನು ಕ್ಯಾಬಿನೆಟ್ ರಿಷಪಲ್ ಗೆ ಹೈಕಮಾಂಡ್ ನಿಂದಲೂ ಗ್ರೀನ್ಸಿಗ್ನಲ್ ಸಿಗಲಿದೆ ಎನ್ನಲಾಗ್ತಿದೆ.ಕೆಲವು ಹಿರಿಯ ಸಚಿವರನ್ನ ಕೈಬಿಡಬೇಕಾಗಿದೆ.ತಮ್ಮ ಆಪ್ತರನ್ನೂ ಕೈಬಿಡಬೇಕಾದ ಅನಿವಾರ್ಯತೆ ಸಿಎಂಗೆ ಎದುರಾಗಿದೆ.ಹಾಗಾಗಿ ಹೈಕಮಾಂಡ್ ಕಡೆ ಬೊಟ್ಟು ಮಾಡಿ ಪಾರಾಗಲು ಸಿಎಂ ಪ್ರಯತ್ನ ನಡೆಸಿದ್ದಾರೆ.
ಇನ್ನು ಸಂಪುಟ ಪುನಾರಚನೆಯ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ.ಕೆಲವರನ್ನ ಕೈಬಿಡುವ ಬಗ್ಗೆ ಸಿಎಂ ಸುಳಿವು ನೀಡಿದ್ದಾರಂತೆ.ಹೈಕಮಾಂಡ್ ಈಗಲೇ ಮಾಡೋಣ ಅಂದ್ರೆ ಡಿಸೆಂಬರ್ ಕೊನೆಯಲ್ಲಿ ಕ್ಯಾಬಿನೆಟ್ ರಿಷಪಲ್ ಗ್ಯಾರೆಂಟಿ.ಇಲ್ಲವಾದ್ರೆ ಫೆಬ್ರವರಿಯಲ್ಲಿ ಪುನಾರಚನೆ ಖಚಿತ ಎಂಬ ಮಾತಿದೆ.ಹೈಕಮಾಂಡ್ ನಿಂದ ಯಾವ್ಯಾವ ಸಚಿವರಿಗೆ ಕರೆ ಬರುತ್ತೋ..ಯಾವ ಹೊಸಬರಿಗೆ ಅವಕಾಶ ಸಿಗುತ್ತೋ ನೋಡಬೇಕಿದೆ.ಹೀಗಾಗಿ ಕೆಲವು ಶಾಸಕರು ದೆಹಲಿಗೆ ತೆರಳಿದ್ದಾರೆ.ಕೆಲವು ಹಿರಿಯ ಸಚಿವರಿಗೆ ಆತಂಕ ಶುರುವಾಗಿದೆ..
ಸಂಪುಟದಿಂದ ಯಾರಿಗೆ ಕೊಕ್ ಸಾಧ್ಯತೆ..?
೧)ಆರ್ ಬಿ ತಿಮ್ಮಾಪುರ್-ಅಬಕಾರಿ ಸಚಿವ
೨)ಕೆ.ಎನ್ ರಾಜಣ್ಣ- ಸಹಕಾರ ಸಚಿವ
೩)ಎನ್.ಎಸ್. ಬೋಸರಾಜು- ಸಣ್ಣ ನೀರಾವರಿ ಸಚಿವ
೪)ಕೆ.ಎಚ್ ಮುನಿಯಪ್ಪ-ಆಹಾರ ಸಚಿವ
೫)ಮಧು ಬಂಗಾರಪ್ಪ-ಶಿಕ್ಷಣ ಸಚಿವ
೬)ಕೆ. ವೆಂಕಟೇಶ್- ಪಶುಸಂಗೋಪನೆ ಸಚಿವ
೭)ಜಮೀರ್ ಅಹ್ಮದ್-ವಸತಿ ಸಚಿವ
೮)ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮಕ್ಕಳ ಕಲ್ಯಾಣ ಸಚಿವೆ
೯)ರಹೀಂಖಾನ್- ಪೌರಾಡಳಿತ ಸಚಿವ
ಯಾರ್ಯಾರಿಗೆ ಸಚಿವಸ್ಥಾನ..?
೧)ಬಿ. ನಾಗೇಂದ್ರ- ಮಾಜಿ ಸಚಿವ
೨)ಬಿ.ಕೆ ಹರಿಪ್ರಸಾದ್- ಎಂಎಲ್ ಸಿ
೩)ವಿನಯ್ ಕುಲಕರ್ಣಿ- ಧಾರವಾಡ ಶಾಸಕ
೪)ಲಕ್ಷ್ಮಣ ಸವದಿ- ಅಥಣಿ ಶಾಸಕ
೫)ಸಿ.ಪಿ ಯೋಗೇಶ್ವರ್-ಚನ್ನಪಟ್ಟಣ ಶಾಸಕ
೬)ಕೃಷ್ಣಪ್ಪ- ವಿಜಯನಗರ ಶಾಸಕ
೭)ಯು.ಟಿ ಖಾದರ್-ಸ್ಪೀಕರ್, ಮಂಗಳೂರು ಶಾಸಕ
೮)ನರೇಂದ್ರಸ್ವಾಮಿ-ಮಳವಳ್ಳಿ ಶಾಸಕ
೯)ಅಜಯ್ ಸಿಂಗ್-ಜೇವರ್ಗಿ ಶಾಸಕ
೧೦)ಬಸವರಾಜ ರಾಯರೆಡ್ಡಿ- ಯಲಬುರ್ಗಾ ಶಾಸಕ
೧೧)ಬಿ.ಕೆ. ಸಂಗಮೇಶ್-ಭದ್ರಾವತಿ ಶಾಸಕ
೧೨)ರೂಪಾ ಶಶಿಧರ್- ಕೆಜಿಎಫ್ ಶಾಸಕಿ