ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆಯಾಗಲಿದೆ.ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡುವಂತೆ ಡಿಕೆಶಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಡಿಸಿಎಂ,ಎರಡು ಸಚಿವ ಖಾತೆಗಳ ಜೊತೆಗೆ ಅಧ್ಯಕ್ಷ ಸ್ಥಾನ ನಿಭಾಯಿಸೋದು ಕಷ್ಟ ವೆಂದು ನೋವು ತೋಡಿಕೊಂಡಿದ್ದರು.
ಹೀಗಾಗಿ ಅಧ್ಯಕ್ಷ ಸ್ಥಾನವನ್ನ ಬೇರೆಯವರಿಗೆ ಕೊಡುವ ಬಗ್ಗೆ ಹೈಕಮಾಂಡ್ ಆಲೋಚನೆ ಮಾಡಿದೆ. ಸತೀಶ್ ಜಾರಕಿಹೊಳಿಯವರನ್ನ ತಂದ ಕೂರಿಸುವ ಲೆಕ್ಕಾಚಾರ ಹೈಕಮಾಂಡ್ ಮುಂದಿದೆ.
ಈ ಹಳೆ ನಾಣ್ಯಗಳು, ನೋಟುಗಳು ನಿಮ್ಮ ಹತ್ರ ಇದ್ಯಾ.? ಹಾಗಿದ್ದರೆ ಒಂದೇ ರಾತ್ರೀಲಿ ಲಕ್ಷಾಧಿಪತಿ ಆಗ್ತಿರಾ!
ಆದ್ರೆ, ಸತೀಶ್ ಜಾರಕಿಹೊಳಿ ಸಚಿವ ಸ್ಥಾನದ ಜೊತೆ ಕೋಡೋದಾದ್ರೆ ಓಕೆ ಇಲ್ಲವೆಂದ್ರೆ ಬೇಡವೇ ಬೇಡ ಎಂಬ ಬೇಡಿಕೆ ಇಟ್ಟಿದ್ದಾರಂತೆ. ಹಾಗಾಗಿ ಇದ್ರ ಬಗ್ಗೆ ಸಿಎಂ,ಡಿಸಿಎಂ ಜೊತೆ ಚರ್ಚೆಯಾಗಲಿದೆ. ಒಟ್ನಲ್ಲಿ ,ರಾಜ್ಯ ಸಚಿವ ಸಂಪುಟ ಪುನಾರಚನೆಯಾಗೋದು ಗ್ಯಾರೆಂಟಿಯಾಗಿದೆ.
ಫರ್ಪಾರ್ಮೆನ್ಸ್ ಆಧಾರದ ಮೇಲೆ ಕೆಲವು ಸಚಿವರನ್ನ ಕೈಬಿಟ್ಟುಹೊಸಬರಿಗೆ ಮಣೆ ಹಾಕೋಕೆ ಹೈಕಮಾಂಡ್ ನಿರ್ಧರಿಸಿದೆ.ಈ ಬಗ್ಗೆ ಇಂದು ಸಿಎಂ,ಡಿಸಿಎಂ ಜೊತೆ ವರಿಷ್ಠರು ಚರ್ಚೆ ನಡೆಸಲಿದ್ದಾರೆ. ಬಹುತೇಕ ಸಂಪುಟ ಪುನಾರಚನೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳಿವೆ. ಇದೇ ವೇಳೆ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಚರ್ಚೆಯಾಗಲಿದೆ.