ಅದು 2023ರ ವರ್ಷ ಆರ್ಸಿಬಿ ವರ್ಸಸ್ ಲಖನೌ ಪಂದ್ಯ ನೋಡದೇ ಇರುವವರಿಗೆ ಐಪಿಎಲ್ನಲ್ಲೇ ದಿ ಬೆಸ್ಟ್ ರೈವಲ್ರಿ ಆಟವನ್ನು ಮಿಸ್ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲೇ ಆರ್ಸಿಬಿ ತಂಡವನ್ನು ಸೋಲಿಸಿದ್ವಿ ಅಂತ ಅಬ್ಬರಿಸುತ್ತಿದ್ದ ಲಖನೌ ತಂಡದ ಬಾಯಿ ಮುಚ್ಚಿಸಿದ್ದರು ವಿರಾಟ್ ಕೊಹ್ಲಿ. ಅಬ್ಬಬ್ಬಾ ವಿರಾಟ್ ಗಿದ್ದ ಆ ಆಟದ ಅಗ್ರೆಷನ್ ಮೈ ರೋಮಾಂಚಕಗೊಳಿಸಿತ್ತು. ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯನ್ನು ಯಾವುದೇ ಕಾರಣಕ್ಕೂ ಕೆಣಕಬಾರದು. ಕೆಣಕಿ ಉಳಿದವರೂ ಇಲ್ಲ! ಅದು ಐಪಿಎಲ್ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ, ತನ್ನ ಕೆಣಕಿದವರಿಗೆ ಅಲ್ಲೆ ಡ್ರಾ ಅಲ್ಲೇ ಬಹುಮಾನ ಕೊಡದೆ ಸುಮ್ಮನಿರಲ್ಲ ಕೊಹ್ಲಿ
ಕಿಂಗ್ ಕೊಹ್ಲಿ ಹೆಸರೇ ಹೇಳುತ್ತೆ ಮರ್ರೆ ಅವರ ಕೆಪಾಸಿಟಿ ಏನು ಅಂತ. ಬ್ಯಾಟ್ ಹಿಡಿದು ಫೀಲ್ಡಿಗೆ ಎಂಟ್ರಿ ಕೊಟ್ಟಾಗ ಎದುರಾಳಿಗಳು ಒಂದು ಕ್ಷಣ ನಡುಗೋದು ಗ್ಯಾರಂಟಿ. ಏಕೆಂದರೆ ಫಾರ್ಮ್ ನಲ್ಲಿರುವ ವಿರಾಟ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಇಂತಹ ವಿರಾಟ್ ಕೆಣಕಿದವರೂ ಕ್ರಿಕೆಟ್ ಲೋಕದಲ್ಲೇ ಕಣ್ಮರೆಯಾಗಿದ್ದಾರೆ. ಅದರಂತೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಸಖತ್ ಸದ್ದು ಮಾಡಿದ್ದ ಅಫ್ಘಾನಿಸ್ತಾನ್ ಆಟಗಾರ ನವೀನ್ ಉಲ್ ಹಕ್ಗೆ ಈ ಬಾರಿ ಅದೃಷ್ಟ ಕೈ ಕೊಟ್ಟಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ನವೀನ್ ಅವರ ಖರೀದಿಗೆ ಈ ಬಾರಿ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸಿಲ್ಲ ಎಂಬುದು ವಿಶೇಷ.
ಇದಕ್ಕೆ ಒಂದು ಕಾರಣ ಈ ಹಿಂದಿನ ಘಟನೆ ಎಂದು ವಿಶ್ಲೇಷಿಸಲಾಗುತ್ತಿದೆ. ಐಪಿಎಲ್ 2023ರ RCB vs LSG ನಡುವಣ ಪಂದ್ಯದ ವೇಳೆ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಇದಾದ ಬಳಿಕ ಅಫ್ಘಾನ್ ಆಟಗಾರ ಕಿಂಗ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಲ್ಲದೆ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದ ವೇಳೆ ನವೀನ್ ಉಲ್ ಹಕ್ ವಿರುದ್ಧ ಅಭಿಮಾನಿಗಳಿಂದ ಮೂದಲಿಕೆ ಕೂಡ ಕೇಳಿ ಬಂದಿತ್ತು. ಇದು ಲಕ್ನೋ ಫ್ರಾಂಚೈಸಿಯ ಮೇಲೂ ಪರೋಕ್ಷ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಇದೇ ಕಾರಣದಿಂದ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ನವೀನ್ ಉಲ್ ಹಕ್ ಅವರನ್ನು ಕೈ ಬಿಟ್ಟಿದೆ. ಅತ್ತ ಉಳಿದ ಫ್ರಾಂಚೈಸಿಗಳ ಕೂಡ ನವೀನ್ ಅವರನ್ನು ಮೂಲ ಬೆಲೆಗೆ ಖರೀದಿಸಲು ಮುಂದಾಗಲಿಲ್ಲ. ಇನ್ನು ಕೊನೆಯ ಸುತ್ತಿನ ಶಾರ್ಟ್ ಲಿಸ್ಟ್ ಪಟ್ಟಿಯಲ್ಲೂ ನವೀನ್ ಉಲ್ ಹಕ್ ಸ್ಥಾನ ಪಡೆದಿರಲಿಲ್ಲ. ಅಂದರೆ ಕಳೆದ ಸೀಸನ್ನಲ್ಲಿ 10 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದ ನವೀನ್ ಈ ಬಾರಿ ಯಾವುದೇ ಫ್ರಾಂಚೈಸಿಯ ಹಿಟ್ ಲಿಸ್ಟ್ನಲ್ಲಿರಲಿಲ್ಲ ಎಂಬುದು ಸ್ಪಷ್ಟ.
ಹೀಗಾಗಿಯೇ ಇದೀಗ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯ ಮೂಲಕ ನವೀನ್ ಉಲ್ ಹಕ್ ಅವರನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.